

ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಯ ಹಿನ್ನೆಲೆಯಲ್ಲಿ ಕಾಸರಗೋಡು ನಗರ ಅಲಂಕಾರ ತಯಾರಿಗೆ ನಗರದ ಎಲ್ಲ ಸಂಘ ಸಂಸ್ಥೆಗಳು ಹಾಗೂ ಆಟೋ, ಟ್ಯಾಕ್ಸಿಸ್ಟಾೃಂಡ್ ಪದಾಧಿಕಾರಿಗಳ ವಿಶೇಷ ಸಭೆ ಪೇಟೆ ಶ್ರೀ ವೆಂಕಟರಮಣ ಕ್ಷೇತ್ರದಲ್ಲಿ ಜರುಗಿತು.
ಬ್ರಹ್ಮಕಲಶೋತ್ಸವ ಕೇಂದ್ರ ಸಮಿತಿ ಉಪಾಧ್ಯಕ್ಷ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾಸರಗೋಡು ತಾಲೂಕು ಕಚೇರಿ ಭಾಗದಿಂದ ಕರಂದಕ್ಕಾಡ್ ತನಕ ಆಯಾ ಸಂಘಟನೆ ಸದಸ್ಯರು ರಸ್ತೆಬದಿ ಅಲಂಕಾರ ನಡೆಸುವ ಕುರಿತು ತೀರ್ಮಾನಿಸಲಾಯಿತು.
ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯ ಕೇಶವ ಎ. ಅಲಂಕಾರ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು. ಪ್ರಾದೇಶಿಕ ಸಮಿತಿ ಕಾರ್ಯದರ್ಶಿ ತುಕರಾಮ ಆಚಾರ್ಯ ಕೆರೆಮನೆ, ಪಾಂಡುರಂಗ ಆಟೋ ಸ್ಟಾೃಂಡಿನ ಸದಾಶಿವ ಸೀತಾಂಗೋಳಿ, ಅರವಿಂದ ಗಂಗೆ, ಮನೋಹರ ಅಡ್ಕತ್ತಬೈಲ್, ಶ್ರೀ ಮಲ್ಲಿಕಾರ್ಜುನ ಟ್ಯಾಕ್ಸಿ ಸ್ಟಾೃಂಡಿನ ಜಯರಾಮ್, ಪ್ರಮೋದ್, ಎಸ್.ವಿ.ಟಿ. ಧರ್ಮಶಾಸ್ತಾ ಸೇವಾ ಸಂಘದ ಪದಾಧಿಕಾರಿಗಳಾದ ಗಿರೀಶ್ ಆಚಾರ್ಯ, ಆನಂದಕೃಷ್ಣ, ಕಿಂಗ್ ಕೋಬ್ರಾ ಆಟೋ ಸ್ಟಾೃಂಡಿನ ಹಾಗೂ ಕಟ್ಟೆ ಸಮಿತಿಯ ಕಾರ್ಯಕರ್ತರಾದ ಕಿರಣ್, ನವೀನ್ ಕುಮಾರ್ ಶೆಟ್ಟಿ, ಎಸ್.ವಿ.ಟಿ ಯ ಕಿಶೋರ್ ಕುಮಾರ್, ಸಂತೋಷ್ ಕುಮಾರ್ ಭಂಡಾರಿ, ವಸಂತ್ ಕೆರೆಮನೆ, ಮಠದಪೇಟೆ ಆಟೋ ಸ್ಟಾೃಂಡ್ ಕಾರ್ಯಕರ್ತರಾದ ರಮೇಶ್, ಬೀರಂತಬೈಲಿನ ಪ್ರಶಾಂತ್ ಸಹಿತ ಕಾರ್ಯಕರ್ತರು ಉಪಸ್ಥಿತರಿದ್ದರು. ಕರಂದಕ್ಕಾಡ್ ಪ್ರಾದೇಶಿಕ ಸಮಿತಿ ಅಧ್ಯಕ್ಷ ಹರೀಶ್ ಕೆ.ಆರ್ ಸ್ವಾಗತಿಸಿದರು. ವಿವೇಕಾನಂದ ನಗರ ಪ್ರಾದೇಶಿಕ ಸಮಿತಿ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ ವಂದಿಸಿದರು.