ಎಕೆಜಿಟಿಸಿ ರಾಜ್ಯ ಸಮ್ಮೇಳನ

New Project (2)
Published on

ಕಾಸರಗೋಡು: ಅಸೋಸಿಯೇಶನ್ ಆಫ್ ಆಲ್ ಕೇರಳ ಗವರ್ನಮೆಂಟ್ ಟೀಚರ್ಸ್(ಎಕೆಜಿಟಿಸಿ)ಸಂಘಟನೆ 67ನೇ ರಾಜ್ಯ ಸಮ್ಮೇಳನ ಕಾಸರಗೋಡು ನಗರಸಭಾಂಗಣದಲ್ಲಿ ಶನಿವಾರ ಆರಂಭಗೊಂಡಿತು.

ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಇಲಾಖೆ ಸಚಿವೆ ಡಾ.ಆರ್.ಬಿಂದು ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಕೇರಳದ ಉನ್ನತ ಶಿಕ್ಷಣ ಕ್ಷೇತ್ರ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟದ ಶ್ರೇಯಾಂಕದಲ್ಲಿ ಮುನ್ನಡೆ ಕಾಯ್ದುಕೊಳ್ಳಲು ಸಾಧ್ಯವಾಗಿದೆ ಎಂದು ತಿಳಿಸಿದರು. ಶಾಸಕರಾದ ಸಿ.ಎಚ್ ಕುಞಂಬು, ಎಂ.ರಾಜಗೋಪಾಲನ್, ಸಂಘಟನೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

’ಯುಜಿಸಿ ಕರಡು ನೀತಿ 2025ರ ಸವಾಲುಗಳು ಮತ್ತು ಪರಿಣಾಮಗಳು’ ಕುರಿತಾದ ಶೈಕ್ಷಣಿಕ ಸಮ್ಮೇಳನವನ್ನು ಕೆಸಿಎಚ್‌ಆರ್ ಅಧ್ಯಕ್ಷ ಡಾ.ಕೆ.ಎನ್.ಗಣೇಶ್ ಉದ್ಘಾಟಿಸಿದರು. ಡಾ.ವಿನು ಭಾಸ್ಕರ್ ಅಧ್ಯಕ್ಷತೆ ವಹಿಸಿದ್ದರು. ಡಾ.ಎ.ನಿಶಾಂತ್, ಡಾ.ಎ.ನಸೀಬ್, ಎಸ್ ಎಫ್ ಐ ರಾಜ್ಯ ಕಾರ್ಯದರ್ಶಿ ಪಿ.ಎಸ್.ಸಂಜೀವ್ ಮಾತನಾಡಿದರು. ಡಾ.ಎಂ.ಎಸ್.ಮುರಳಿ ಸ್ವಾಗತಿಸಿದರು. ಡಾ. ಆರ್.ರಾಜಕುಮಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net