ನರ್ಸ್​-ಡ್ರೈವರ್​ ಲವ್​ ಟ್ರ್ಯಾಜೆಡಿ; ಕಾರೊಳಗೇ ಬೆಂಕಿ ಹಚ್ಚಿಕೊಂಡು ಪ್ರೇಮಿಗಳ ಆತ್ಮಹತ್ಯೆ!

Feature
ಶ್ರೀನಿವಾಸ, ಕಾಂಚನಾ
Published on

ಚಾಮರಾಜನಗರ: ನರ್ಸ್​ ಹಾಗೂ ಡ್ರೈವರ್​ ನಡುವಿನ ಪ್ರೇಮ ದುರಂತ ಅಂತ್ಯ ಕಂಡಿದೆ. ಈ ಪ್ರೇಮಿಗಳಿಬ್ಬರು ಕಾರೊಳಗೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲೂಕಿನ ತೇರಂಬಳ್ಳಿ ಕೆರೆ ಬಳಿ ಈ ಘಟನೆ ನಡೆದಿದೆ.

ಯಳಂದೂರು ತಾಲ್ಲೂಕು ಮಾಂಬಳ್ಳಿ ಗ್ರಾಮದ ಕಾಂಚನಾ (20) ಹಾಗೂ ಶ್ರೀನಿವಾಸ್ (26) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಕಾಂಚನಾ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ಶ್ರೀನಿವಾಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ.

ಅಕ್ಕಪಕ್ಕದ ಮನೆಯಲ್ಲಿ ವಾಸ ಮಾಡುತ್ತಿದ್ದ ಕಾಂಚನ ಮತ್ತು ಶ್ರೀನಿವಾಸ್ ಮಧ್ಯೆ ಪ್ರೇಮಾಂಕುರವಾಗಿದ್ದು, ಇಬ್ಬರು ಮದುವೆಯಾಗಲು ಬಯಸಿದ್ದರೂ ಮನೆಯವರ ವಿರೋಧ ಎದುರಾಗಿತ್ತು. ಇದರಿಂದ ಬೇಸತ್ತಿದ್ದ ಇವರು ಕಾರಿನಲ್ಲಿ ಕುಳಿತು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್​ಪಿ ಹಾಗೂ ಎಎಸ್​​ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net