ಮನೆಯಲ್ಲಿದ್ದ ವಸ್ತುಗಳನ್ನು ತಾವೇ ಚೆಲ್ಲಾಡಿ ಕಳ್ಳತನವಾಗಿದೆ ಎಂದು ಪೊಲೀಸರಿಗೆ ಸುಳ್ಳುದೂರು ಕೊಟ್ಟ ದಂಪತಿ: ಆಮೇಲಾಗಿದ್ದೇ ಬೇರೆ...

Feature
Published on

ಹಾಸನ: ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ತಾವೇ ಚೆಲ್ಲಾಪಿಲ್ಲಿ ಆಗಿಸಿ, ಬಳಿಕ ಮನೆಯಲ್ಲಿ ಕಳ್ಳತನವಾಗಿದೆ ಎಂದು ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಹಾಸನ ಜಿಲ್ಲೆಯ ಬೇಲೂರಿನಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.

ಹಾಸನ ಜಿಲ್ಲೆ ಬೇಲೂರು ಪಟ್ಟಣದ ಗುರಪ್ಪಗೌಡರ ಬೀದಿಯಲ್ಲಿನ ನಿವಾಸಿಗಳಾದ ಕಲ್ಲೇಶ್​ ಆಚಾರ್ ಮತ್ತು ಮಮತಾ ದಂಪತಿ ಪೊಲೀಸರಿಗೆ ಈ ಸುಳ್ಳು ದೂರನ್ನು ನೀಡಿದ್ದರು. ಅಷ್ಟೇ ಅಲ್ಲದೆ ಕಳವಾದ ಬಗ್ಗೆ ಮಮತಾ ರಸವತ್ತಾದ ಕಥೆಯನ್ನೇ ಹೇಳಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಅಸಲಿಯತ್ತು ಬೆಳಕಿಗೆ ಬಂದಿದೆ.

ಈ ದಂಪತಿ ಸಾಲ ಮಾಡಿಕೊಂಡಿದ್ದು, ಅದನ್ನು ತೀರಿಸಲಾಗದೆ ಹೆದರಿ ಇಂಥದ್ದೊಂದು ಕಥೆ ಕಟ್ಟಿದ್ದಾರೆ. ತನಿಖೆಯಲ್ಲಿ ಅಸಲಿ ವಿಷಯ ಹೊರಬರುತ್ತಿದ್ದಂತೆ ಗಂಡ-ಹೆಂಡತಿ ಇಬ್ಬರನ್ನೂ ವಶಕ್ಕೆ ಪಡೆದ ಪೊಲೀಸರು, ಪೊಲೀಸರಿಗೇ ಸುಳ್ಳು ಹೇಳಿದ್ದಕ್ಕೆ ದೂರು ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net