ಈಗಾಗಲೇ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂಗಾರು ಪೂರ್ವದಲ್ಲಿ ಉತ್ತಮ ಮಳೆಯಾಗಿದ್ದು, ಉಳುಮೆ ಸೇರಿ ಬಿತ್ತನೆ ಕಾರ್ಯಗಳೂ ಆರಂಭವಾಗಿವೆ. 2020ರಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದ್ದು, ರೈತರು ಹೆಚ್ಚಾಗಿ ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಕೃಷಿ ಜತೆಗೆ ತಾತ್ಕಾಲಿಕ ಅವಧಿಗೆ ಕೆಲಸವನ್ನರಸಿ ವಲಸೆ ಹೋಗಿ ಬಂದವರಿಗೆ ಹೋಮ್ ಕ್ವಾರಂಟೈನ್ ಶಿಕ್ಷೆಯಾಗಿ ಪರಿಣಮಿಸಿದೆ. ಈಗ ಕೂಲಿಗೂ ಹೋಗಲಾಗದೆ, ಕೃಷಿ ಕಾರ್ಯಕ್ಕೂ ಮನೆಯಿಂದ ಹೊರ ಬರಲಾಗದೆ, ಎರಡೂ ಕಡೆಯಿಂದ ನಷ್ಟ ಅನುಭವಿಸುವಂತಾಗಿದೆ.