More

    ಬಾಂಗ್ಲಾ ಹಿಂದುಗಳ ಮೇಲೆ ಮಿತಿಮೀರಿದೆ ದೌರ್ಜನ್ಯ- ಕಳೆದ ತಿಂಗಳ ಪಟ್ಟಿ ನೋಡಿ…

    ಗುವಾಹಟಿ: ಬಾಂಗ್ಲಾದೇಶದಲ್ಲಿ ಜಮೀನು ಕಸಿದುಕೊಳ್ಳುವುದರಿಂದ ಹಿಡಿದು ಅಪಹರಣದ ತನಕ ಒಂದಲ್ಲ, ಎರಡಲ್ಲ ಹಲವಾರು ರೀತಿಯಲ್ಲಿ ಹಿಂದುಗಳನ್ನು ಹಿಂಸಿಸಲಾಗುತ್ತಿದೆ, ದೌರ್ಜನ್ಯವೆಸಗಲಾಗುತ್ತಿದೆ. ಲಾಕ್​ಡೌನ್ ಅವಧಿಯಲ್ಲಂತೂ ಈ ರೀತಿ ಪ್ರಕರಣಗಳು ಹೆಚ್ಚಾಗಿರುವುದು ಕಳವಳಕಾರಿ ವಿಚಾರ ಎಂದು ವರ್ಲ್ಡ್​ ಹಿಂದು ಫೆಡರೇಷನ್​ ನ ಬಾಂಗ್ಲಾ ಚಾಪ್ಟರ್ ಆರೋಪಿಸಿದೆ.

    ಈ ಸಂಬಂಧ ಹಲವು ಘಟನಾವಳಿಗಳನ್ನು ಉಲ್ಲೇಖಿಸಿರುವ ವರ್ಲ್ಡ್​ ಹಿಂದು ಫೆಡರೇಷನ್​, ಕಳೆದ ತಿಂಗಳು ಅಂಗಡಿ ಕೊಳ್ಳೆ ಹೊಡೆದ ಘಟನೆ, ವ್ಯಾಪಾರಿಯೊಬ್ಬನನ್ನು ಹತ್ಯೆ ಮಾಡಿದ ಘಟನೆ, ಜಮೀನು ಕಸಿದುಕೊಂಡ ಘಟನೆ, ದೇವಸ್ಥಾನಗಳನ್ನು ನಾಶ ಮಾಡಿ ದೇವರ ಪ್ರತಿಮೆಗಳನ್ನು ಹಾಳುಗೆಡವಿದ ಘಟನೆ, ಹಿಂದು ಕುಟುಂಬಗಳನ್ನು ದೇಶ ಬಿಟ್ಟು ಓಡುವಂತೆ ಮಾಡಿದ ಘಟನೆ, ಹಿಂದು ಹುಡುಗಿಯರು, ಮಹಿಳೆಯರನ್ನು ಅಪಹರಿಸಿ ಅತ್ಯಾಚಾರವೆಸಗಿದ ಘಟನೆಗಳನ್ನು ಪಟ್ಟಿ ಮಾಡಿ ಶನಿವಾರ ಪ್ರಕಟಿಸುವ ಮೂಲಕ ಜಗತ್ತಿನ ಗಮನವನ್ನು ಸೆಳೆದಿದೆ.

    ಇದನ್ನೂ ಓದಿ: ಮೇ 17ರ ಬಳಿಕ ಪದವಿ ಪರೀಕ್ಷೆ ಕುರಿತು ನಿರ್ಧಾರ: ಸುಳಿವು ನೀಡಿದ್ರು ಡಿಸಿಎಂ

    ಫೆಡರೇಷನ್ ಪಟ್ಟಿ ಮಾಡಿರುವ ಕಳೆದ ಒಂದೇ ತಿಂಗಳು ನಡೆದ ದೌರ್ಜನ್ಯದ ಪ್ರಕರಣಗಳು ಹೀಗಿವೆ-

    ಏಪ್ರಿಲ್​ 4: ಪಟುಖಾಲಿ ಜಿಲ್ಲೆಯ ಮಹಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪುರಾನಾ ಮಹಿಪುರ ಯೂನಿಯನ್​ನ ನಾರಾಯಣ ಸರ್ಕಾರ್ ಎಂಬುವವರಿಗೆ ಸೇರಿದ ಪಿತ್ರಾರ್ಜಿತ ಆಸ್ತಿಯನ್ನು ಅತಿಕ್ರಮಣ ಮಾಡಿ ವಶದಲ್ಲಿರಿಸಿಕೊಂಡಿದ್ದಾರೆ.
    ಏಪ್ರಿಲ್ 6: ಜೆಸ್ಸೋರ್​ ಜಿಲ್ಲೆಯ ಚೌಗಚ್ಛಾ ಪೊಲೀಸ್ ಠಾಣಾ ವ್ಯಾಪ್ತಿಯ ಮೂರು ಗ್ರಾಮಗಳಲ್ಲಿ 50 ಹಿಂದು ಕುಟುಂಬಗಳಿಗೆ ಸೇರಿದ 100 ಬಿಘಾ ಜಮೀನನ್ನು ಸ್ಥಳೀಯ ಪುಡಾರಿ ಮತ್ತು ಆತನ ಇಬ್ಬರು ಮಕ್ಕಳು ಅತಿಕ್ರಮಿಸಿಕೊಂಡಿದ್ದಾರೆ.
    ಏಪ್ರಿಲ್ 7: ಪಟುಖಾಲಿ ಜಿಲ್ಲೆಯ ದಶ್ಮಿನಾ ಉಪಜಿಲ್ಲಾದಲ್ಲಿರುವ ಹಿಂದೂ ದೇವಸ್ಥಾನವೊಂದರ ದೇವರ ಪ್ರತಿಮೆಯನ್ನು ಇಸ್ಲಾಮಿಕ್ ಮೂಲಭೂತವಾದಿಗಳು ಹಾಳುಗೆಡವಿದ್ದಾರೆ.
    ಏಪ್ರಿಲ್ 8: ಪ್ರವಾದಿ ಬಗ್ಗೆ ಅವಹೇಳನಕಾರಿ ಸ್ಟೇಟಸ್ ಅಪ್ಲೋಡ್ ಮಾಡಿದ್ದಾರೆ ಎಂಬ ಸುಳ್ಳು ಆರೋಪ ಹೊರಿಸಿ ಇಂದ್ರಜಿತ್ ಹಜಾರಿ (35) ಎಂಬ ಶಾಲಾ ಶಿಕ್ಷಕರನ್ನು ಪೊಲೀಸರು ಬಂಧಿಸಿದ್ದಾರೆ.

    ಇದನ್ನೂ ಓದಿ: ಷಾ ಅವರ ಆರೋಗ್ಯಕ್ಕೇನಾಯಿತು!?- ಅವರ ಟ್ವೀಟ್​​ನಲ್ಲೇನಿದೆ?

    ಏಪ್ರಿಲ್ 9: ಬೋಗ್ರಾ ಜಿಲ್ಲೆಯ ಶಿಬ್​ಗಂಜ್​ ಉಪಜಿಲ್ಲಾದ ಕುಕಿ ಕಾಲಿದಾಸ್​ ಗ್ರಾಮದ ಶಿವದೇವಸ್ಥಾನದಲ್ಲಿನ ಶ್ರೀ ಶ್ರೀ ರಾಧಾ ಗೋವಿಂದ್​ ಮತ್ತು ಲಕ್ಷ್ಮಿಯ ವಿಗ್ರಹಗಳನ್ನು ದುಷ್ಕರ್ಮಿಗಳು ಹಾನಿಗೊಳಿಸಿದ್ದಾರೆ.
    ಏಪ್ರಿಲ್​ 10: ಬಗೇರ್​ಹಟ್​ ಜಿಲ್ಲೆಯ ಮೊರೇಲ್​ಗಂಜ್​ನ ಜೊಬೊನ್ ಮೃಧಾ ಎಂಬುವವರಿಗೆ ಸೇರಿದ ಪಿತ್ರಾರ್ಜಿತ 6 ಬಿಘಾ ಜಮೀನನ್ನು ಸ್ಥಳೀಯರೊಬ್ಬರು ಅತಿಕ್ರಮಿಸಿಕೊಂಡರು.
    ಏಪ್ರಿಲ್ 11: ಫರೀದ್​ಪುರ ಜಿಲ್ಲೆಯ ಅಲಾಂಡಂಗಾ ಉಪಜಿಲ್ಲಾದ ಟಿಟುಕಂಡಿ ಗ್ರಾಮದ ಹಿಂದು ವ್ಯಾಪಾರಿ ಅಸಿತ್ ಕುಮಾರ್ ಸರ್ಕಾರ್ ಅವರಿಂದ ಸ್ಥಳೀಯ ಗೂಂಡಾ 5 ಲಕ್ಷ ಟಾಕಾ ಬೇಡಿಕೆ ಇರಿಸಿದ್ದ. ಇದರ ಬೆನ್ನಿಗೇ ಆ ಗೂಂಡಾ ಮತ್ತು 30 ಸಹಚರರು ದಾಳಿ ನಡೆಸಿದ್ದ ಪರಿಣಾಮ ಸರ್ಕಾರ್ ಗಂಭೀರ ಗಾಯಗೊಂಡಿದ್ದಾರೆ.
    ಏಪ್ರಿಲ್​ 12: ಬ್ರಾಹ್ಮಣ್​ಬರಿಯಾ ಜಿಲ್ಲೆಯ ನಸೀರ್​ನಗರ ಉಪಜಿಲ್ಲೆಯ ನಸೀರ್​ಪುರ ಗ್ರಾಮದ ಸುಧಾಂಶು ದಾಸ್ ಅವರ ಮನೆಯನ್ನು ಒಬ್ಬ ವ್ಯಕ್ತಿ ಮತ್ತು ಆತನ ಪುತ್ರರು ಸೇರಿ ದೋಚಿದ್ದಾರೆ. ಮೂರು ಲಕ್ಷ ಟಾಕಾಕ್ಕೂ ಹೆಚ್ಚಿನ ಮೌಲ್ಯದ ಮರಗಳನ್ನು ಕಡಿದುರುಳಿಸಿದ್ದಾರೆ.

    ಇದನ್ನೂ ಓದಿ: ಪತ್ನಿಯನ್ನು ಕೊಂದು ಶವ ಮನೆಯಲ್ಲಿಟ್ಟು ಆರಾಮಾಗಿ ಕುಡಿಯಲು ಹೋದ!

    ಏಪ್ರಿಲ್ 13: ಅಸಹಾಯಕರಾಗಿದ್ದ ವಿಧವೆ ಬಸ್ನಾ ರಾಣಿ ದಾಸ್ ಮತ್ತು ಆಕೆಯ ಪುತ್ರ, ಪುತ್ರಿಯರ ಮೇಲೆ ಸ್ಥಳೀಯ ದುಷ್ಕರ್ಮಿಗಳು ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿದ್ದಲ್ಲದೆ, ಆಕೆಗೆ ಸೇರಿದ ಮನೆ ಮತ್ತು ಇತರೆ ಆಸ್ತಿಪಾಸ್ತಿಗಳನ್ನು ದೋಚಿದ್ದಾರೆ.
    ಏಪ್ರಿಲ್ 14: ನರೈಲ್ ಜಿಲ್ಲೆಯ ತನ್ನ ಮನೆಗೆ ಬಹುಕಾಲದ ನಂತರ ಆಗಮಿಸಲು ಇಚ್ಛಿಸಿದ್ದ ಹಿಂದು ಶಿಕ್ಷಕ ದೀಪಕ್ ಕುಮಾರ್​ ರಾಹಾ ಅವರಿಗೆ ಸ್ಥಳೀಯ ಗೂಂಡಾ ಕೊಲೆ ಬೆದರಿಕೆ ಒಡ್ಡಿದ್ದು, ಬಲವಂತವಾಗಿ ಮನೆ ಮತ್ತು ಆಸ್ತಿಯನ್ನು ವಶದಲ್ಲಿರಿಸಿಕೊಂಡಿದ್ದಾನೆ.
    ಏಪ್ರಿಲ್​ 15: ನಿಲ್ಫಮಾರಿ ಜಿಲ್ಲೆಯ ದಿಮ್ಲಾ ಉಪಜಿಲ್ಲಾದಲ್ಲಿ ಧನೇಶ್ವರ ರಾಯ್​ ಎಂಬುವವರ ಪುತ್ರಿ ಪ್ರತಿಮಾ ರಾಣಿಯನ್ನು ಬಲವಂತವಾಗಿ ಕರೆದೊಯ್ದ ದುಷ್ಕರ್ಮಿಗಳು ಇಸ್ಲಾಂಗೆ ಮತಾಂತರಿಸಿದ್ದಾರೆ.
    ಏಪ್ರಿಲ್​ 16: ಬರಿಸಾಲ್ ಜಿಲ್ಲೆಯ ಅಗೈಲ್​​ಝರಾ ಪೊಲೀಸ್ ಠಾಣಾ ವ್ಯಾಪ್ತಿಯ ಪಶ್ಚಿಮ್​ ಸುಜನ್​ಕಾಂತಿ(ಮಲ್ಲಿಕ್​ಪುರ)ಯ ಹಿಂದು ಕುಟುಂಬವೊಂದರ ಮೇಲೆ ಒಬ್ಬ ವ್ಯಕ್ತಿ ಮತ್ತು ಆತನ ಇಬ್ಬರು ಪುತ್ರರು ದಾಳಿ ನಡೆಸಿದ್ದಾರೆ. ಪರಿಣಾಮ ನಾಲ್ವರು ಹಿಂದುಗಳು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಇದನ್ನೂ ಓದಿ: ಲಾಕ್‌ಡೌನ್‌ ಬಳಿಕ ಪುನರಾವರ್ತನಾ ತರಗತಿ ನಡೆಸಲು ಎಬಿವಿಪಿ ಮನವಿ

    ಏಪ್ರಿಲ್​ 17: ರಾಕ್​ಶಾಹಿ ಜಿಲ್ಲೆಯ ನಿಮೈ ಸರ್ಕಾರ್​​ ಅವರ ಪುತ್ರಿ ಅಷ್ಟಮಿ ಸರ್ಕಾರ (14) ಸ್ಥಳೀಯ ವ್ಯಕ್ತಿ ಮತ್ತು ಆತನ ಸಹಚರರ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಳು.
    ಏಪ್ರಿಲ್ 18: ಫೇಸ್​ಬುಕ್​ನಲ್ಲಿ ಅವಹೇಳನಕಾರಿ ಸ್ಟೇಟಸ್ ಹಾಕಿದ್ದ ಎಂದು ಸುಳ್ಳು ಆರೋಪ ಹೊರಿಸಿ ಹಿಂದು ವಿದ್ಯಾರ್ಥಿ ಪರಿತೋಶ್ ಕುಮಾರ್ ಸರ್ಕಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
    ಏಪ್ರಿಲ್​ 19: ಬ್ರಾಹ್ಮಣ್​ಬರಿಯಾ ಜಿಲ್ಲೆಯ ನಸೀರ್​ನಗರದಲ್ಲಿ ನಡೆದ ಅಂತ್ಯ ಸಂಸ್ಕಾರದಲ್ಲಿ ಮಿತಿ ಮೀರಿ ಜನ ಪಾಲ್ಗೊಂಡ ಬಗ್ಗೆ ಬರೆದಿದ್ದ ಬಗೇರ್​ಹಟ್​ನ ಫಕ್ರಿಹಟ್​ ನಿವಾಸಿ ಮಧು ಕುಂಡು(32) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
    ಏಪ್ರಿಲ್ 21: ಸತ್​ಕನಿಯಾದಲ್ಲಿ 60 ಜನರ ಗುಂಪು ಮೂವತ್ತು ಹಿಂದು ಕುಟುಂಬದವರ ಮೇಲೆ ದಾಳಿ ನಡೆಸಿದ ಪರಿಣಾಮ, ಮಕ್ಕಳೂ ಸೇರಿ 25 ಹಿಂದುಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಇದನ್ನೂ ಓದಿ: ಕಾಂಗ್ರೆಸ್ಸಿಗರಿಗೆ ಶಾಕ್ ನೀಡಿದ ಜಾರಿ ನಿರ್ದೇಶನಾಲಯ!

    ಏಪ್ರಿಲ್​ 22: ಜಾಯ್​ಪುರಹಟ್​ ಜಿಲ್ಲೆ ಅಕ್ಕೇಲ್​ಪುರ ಮುನ್ಸಿಪಲ್ ಪ್ರದೇಶದ ಅನೇಕ ಹಿಂದುಗಳ ಮನೆ ಮತ್ತು ದೇವಸ್ಥಾನಗಳ ಮೇಲೆ ದಾಳಿ ನಡೆಸಿರುವ ದುಷ್ಕರ್ಮಿಗಳು ಎಲ್ಲವನ್ನೂ ನಾಶಮಾಡಿದ್ದಾರೆ. ಪಾರ್​ಘಟಿ ದೇವಸ್ಥಾನದಲ್ಲಿ ಜೂಜಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಈ ದಾಳಿ ನಡೆದಿದೆ.
    ಏಪ್ರಿಲ್​ 23: ಖುಲ್ನಾ ಜಿಲ್ಲೆ ಡಕೋಪ್​ ಉಪಜಿಲ್ಲಾದ ಸುಬ್ರತಾ ಮಂಡಲ್​(30) ಎಂಬ ಹಿಂದುವನ್ನು ದುಷ್ಕರ್ಮಿಗಳು ಹತ್ಯೆ ಮಾಡಿದರು.
    ಏಪ್ರಿಲ್ 24: ಬಗೇರ್​ಹಟ್​ ಜಿಲ್ಲೆಯ ಮೊಂಗ್ಲಾ ದಲ್ಲಿನ ಹಿಂದು ಕುಟುಂಬದ ಮೇಲೆ ಗೂಂಡಾಗಳು ದಾಳಿ ನಡೆಸಿದ್ದು, ಮನೆಯಿಂದ ಹೊರಹಾಕಿ ಅದನ್ನು ವಶಪಡಿಸುವ ಉದ್ದೇಶ ಹೊಂದಿದ್ದರು. ಘಟನೆಯಲ್ಲಿ ಒಬ್ಬ ಗರ್ಭಿಣಿ ಸೇರಿ ಕುಟುಂಬ ಆರು ಸದಸ್ಯರು ಗಂಭೀರ ಗಾಯಗೊಂಡಿದ್ದಾರೆ.
    ಏಪ್ರಿಲ್ 25: ಬೋಗ್ರಾ ಜಿಲ್ಲೆಯ ಸರಿಯಾಕಂಡಿಯಲ್ಲಿನ ರಬಿದಾಸ್ ಎಂಬುವವರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮನೆಯನ್ನು ಹಾಳುಗೆಡವಿದ್ದಲ್ಲದೆ, ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಛತ್ತೀಸ್​ಗಢ ಮಾಜಿ ಸಿಎಂ ಅಜಿತ್​ ಜೋಗಿಗೆ ಕಾರ್ಡಿಯಾಕ್ ಅರೆಸ್ಟ್​

    ಏಪ್ರಿಲ್ 26: ಲಕ್ಷ್ಮಿಪುರ ಮುನ್ಸಿಪಲ್ ಟೌನ್​ನಲ್ಲಿ ಎರಡು ದೇವಸ್ಥಾನಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು ದೇವರ ವಿಗ್ರಹಗಳನ್ನು ನಾಶಪಡಿಸಿದ್ದಾರೆ.
    ಏಪ್ರಿಲ್ 27: ನೌಖಾಲಿ ಜಿಲ್ಲೆ ಬೇಗಮ್​ಗಂಜ್​ ಉಪಜಿಲ್ಲಾದ ನರೇಂದ್ರ ಮೋಟ್ಕರ್​ ಮೇಲೆ ದಾಳಿ ನಡೆಸಿದ ವ್ಯಕ್ತಿ ಮತ್ತು ಆತನ ಇಬ್ಬರು ಪುತ್ರರು ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ.
    ಏಪ್ರಿಲ್ 28: ದಿನಜ್​ಪುರದ ಬೋಚಾಗಂಜ್​ ಉಪಜಿಲ್ಲಾದ ಇಶಾನಿಯಾ ಯೂನಿಯನ್ ನಂ.2 ಅಧೀನದ ಮಹೇಶೈಲ್ ಬಜಾರ್​ನ ದುರ್ಗಾ ದೇವಸ್ಥಾನ ಮತ್ತು ಬಂಕಾಲಿ ದೇವಸ್ಥಾನದ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು, ಎರಡೂ ದೇವಸ್ಥಾನಗಳ ಶಿವ ಮತ್ತು ಕಾಳಿ ದೇವರ ವಿಗ್ರಹಗಳನ್ನು ಹಾಳುಗೆಡವಿದ್ದಾರೆ.
    ಏಪ್ರಿಲ್​ 29: ಸತ್​ಖಿರಾ ಜಿಲ್ಲೆಯ ಬಿಕಾಶ್ ಚಂದ್ರ ಘೋಷ್​ ಅವರ ಮೇಲೆ ದಾಳಿ ನಡೆಸಿದ 35-40 ಜನರ ಗುಂಪು ಅವರ ಬಳಿ ಇದ್ದ ಐದು ಭಿಗಾ ಜಮೀನನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. (ಏಜೆನ್ಸೀಸ್)

    ಶ್ವೇತಭವನದಲ್ಲಿ ಏರುತ್ತಲೇ ಇದೆ ಕರೊನಾ ಸೋಂಕಿತರ ಸಂಖ್ಯೆ…ಇವಾಂಕಾ ಟ್ರಂಪ್​ ಅಪಾಯದಲ್ಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts