More

    ಛತ್ತೀಸ್​ಗಢ ಮಾಜಿ ಸಿಎಂ ಅಜಿತ್​ ಜೋಗಿಗೆ ಕಾರ್ಡಿಯಾಕ್ ಅರೆಸ್ಟ್​

    ರಾಯ್​ಪುರ: ಛತ್ತೀಸ್​ಗಢದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಹೃದಯ ಸ್ತಂಭನ ಆದ ಕಾರಣ ಅವರನ್ನು ಕೂಡಲೇ ಸ್ಥಳೀಯ ಶ್ರೀನಾರಾಯಣ ಹಾಸ್ಪಿಟಲ್​ಗೆ ದಾಖಲಿಸಲಾಗಿದೆ ಎಂದು ಅವರ ಪುತ್ರ ಅಮಿತ್ ಜೋಗಿ ತಿಳಿಸಿದ್ದಾರೆ.

    ಇದನ್ನೂ ಓದಿ: ಅಧಿಕಾರಿಗಳು ಕರೆ ಸ್ವೀಕರಿಸಿದ್ದರೆ ಬದುಕಿ ಬರುತ್ತಿದ್ದರೆ 16 ವಲಸೆ ಕಾರ್ಮಿಕರು?

    ಅಜಿತ್ ಜೋಗಿ (74) ಶನಿವಾರ ಬೆಳಗ್ಗೆ ಉಪಾಹಾರ ಸೇವಿಸುತ್ತಿದ್ದ ಸಂದರ್ಭದಲ್ಲಿ ಅನಾರೋಗ್ಯವಾಗಿದ್ದು, ಕೂಡಲೇ ಪ್ರಾಥಮಿಕ ಚಿಕಿತ್ಸೆ ನೀಡಿದ್ದು ಬಳಿಕ ಶ್ರೀನಾರಾಯಣ ಹಾಸ್ಪಿಟಲ್​ಗೆ ಹೆಚ್ಚಿನ ಚಿಕಿತ್ಸೆಗೆ ಸೇರಿಸಲಾಗಿದೆ. ಆಸ್ಪತ್ರೆಯಲ್ಲಿ ಅವರ ಪತ್ನಿ ಶಾಸಕಿ ರೇಣು ಜೋಗಿ ಜತೆಗಿದ್ದಾರೆ. ಅಜಿತ್ ಅವರ ಆರೋಗ್ಯ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಶ್ವೇತಭವನದಲ್ಲಿ ಏರುತ್ತಲೇ ಇದೆ ಕರೊನಾ ಸೋಂಕಿತರ ಸಂಖ್ಯೆ…ಇವಾಂಕಾ ಟ್ರಂಪ್​ ಅಪಾಯದಲ್ಲಿ?

    ಅಜಿತ್​ ಜೋಗಿ ಅವರು ಸರ್ಕಾರಿ ಅಧಿಕಾರಿ ಆಗಿದ್ದವರು ನಂತರದಲ್ಲಿ ರಾಜಕಾರಣಿಯಾಗಿ ಬದಲಾದವರು. 2000ದ ನವೆಂಬರ್​ನಿಂದ 2003ರ ನವೆಂಬರ್ ತನಕ ಅವರು ಕಾಂಗ್ರೆಸ್ ಸರ್ಕಾರ ಇದ್ದಾಗ ಛತ್ತೀಸ್​ಗಢದ ಮೊದಲ ಮುಖ್ಯಮಂತ್ರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. 2016ರ ಚುನಾವಣೆ ಸಂದರ್ಭದಲ್ಲಿ ಉಪಚುನಾವಣೆ ಸಂಬಂಧ ವಿವಾದ ಉಂಟಾದ ವೇಳೆ ಪಕ್ಷದ ಹೈಕಮಾಂಡ್ ವಿರುದ್ಧ ಅಸಮಾಧಾನಗೊಂಡಿದ್ದರು. ಬಳಿಕ ಪಕ್ಷ ತ್ಯಜಿಸಿದ ಅವರು ಮತ್ತು ಪುತ್ರ ಅಮಿತ್ ಜೋಗಿ ಜನತಾ ಕಾಂಗ್ರೆಸ್ ಛತ್ತೀಸ್​ಗಢ (ಜೆ) ಪಕ್ಷ ಸ್ಥಾಪಿಸಿದರು. (ಏಜೆನ್ಸೀಸ್)

    ಈ ಗೆಲುವು ಕಾಂಗ್ರೆಸ್​ಗೂ ಬಿಜೆಪಿಗೂ ಅನಿರೀಕ್ಷಿತ: ತೆಲಂಗಾಣ, ಮಿಜೋರಾಂ ಮಾತ್ರ ನಿರೀಕ್ಷಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts