More

    ಅಧಿಕಾರಿಗಳು ಕರೆ ಸ್ವೀಕರಿಸಿದ್ದರೆ ಬದುಕಿ ಬರುತ್ತಿದ್ದರೆ 16 ವಲಸೆ ಕಾರ್ಮಿಕರು?

    ಭೋಪಾಲ್: ಮಹಾರಾಷ್ಟ್ರದಲ್ಲಿ ಶುಕ್ರವಾರ ಮುಂಜಾನೆ ರೈಲು ಹರಿದು ಮಧ್ಯಪ್ರದೇಶ ಮೂಲದ 16 ವಲಸೆ ಕಾರ್ಮಿಕರು ಮೃತಪಟ್ಟ ಪ್ರಕರಣ ಎರಡೂ ರಾಜ್ಯಗಳ ನಡುವಿನ ಸಮನ್ವಯತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವಲಸೆ ಕಾರ್ಮಿಕರನ್ನು ಕರೆತರುವ ಉಸ್ತುವಾರಿ ಹೊತ್ತಿದ್ದ ಅಧಿಕಾರಿಗಳು ಫೋನ್ ಕರೆ ಸ್ವೀಕರಿಸಿ ಸೂಕ್ತ ವ್ಯವಸ್ಥೆ ಮಾಡಿದ್ದರೆ ಬಡವರ ಜೀವ ಉಳಿಯುತ್ತಿತ್ತು. ಆಡಳಿತ ವರ್ಗವೇ ಈ ದುರಂತಕ್ಕೆ ಕಾರಣ ಎಂದು ಮಧ್ಯಪ್ರದೇಶ ಸರ್ಕಾರವನ್ನು ವಿರೋಧ ಪಕ್ಷಗಳು ತರಾಟೆಗೆ ತೆಗೆದುಕೊಂಡಿವೆ.

    ಇದನ್ನೂ ಓದಿ ಬಿಎಸ್​ವೈ ಆ್ಯಕ್ಟೀವ್​ಗೆ ಹ್ಯಾಟ್ಸಾಫ್ ಎಂದ ಸಚಿವ

    ಮಧ್ಯಪ್ರದೇಶ ಸರ್ಕಾರದ ಕೋರಿಕೆಯಂತೆ 33 ವಿಶೇಷ ರೈಲಿನ ಮೂಲಕ ಮಹಾರಾಷ್ಟ್ರದಲ್ಲಿರುವ ಕಾರ್ಮಿಕರನ್ನು ವಾರದೊಳಗೆ ಅವರ ರಾಜ್ಯಕ್ಕೆ ಕಳಿಸಲು ಮಹಾರಾಷ್ಟ್ರ ವ್ಯವಸ್ಥೆ ಮಾಡಿದೆ. ಆದರೆ ಪ್ರಯಾಣಿಸಲು ಹಲವರಿಗೆ ಪಾಸ್ ಸಿಕ್ಕಿಲ್ಲ.

    ಮಹಾರಾಷ್ಟ್ರದ ಜಾಲ್ನಾದ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಗುಂಪು ಗುರುವಾರ ಸಂಜೆ 7ಕ್ಕೆ ಕಾಲ್ನಡಿಗೆಯಲ್ಲೇ ಮಧ್ಯಪ್ರದೇಶದತ್ತ ಹೊರಟಿತ್ತು. ಊರಿಗೆ ಹೋಗುವ ದಾರಿಗಾಗಿ ಔರಂಗಬಾದ್ ಜಿಲ್ಲೆಯ ಕಾರ್ಮಾಡ್ ಪ್ರದೇಶದ ರೈಲು ಹಳಿಗಳ ಮೇಲೆ ನಡೆದುಕೊಂಡು ಹೊರಟಿದ್ದ ಕಾರ್ಮಿಕರ ಪೈಕಿ ಕೆಲವರು ತಡರಾತ್ರಿ ಹಳಿಗಳ ಮೇಲೆಯೇ ನಿದ್ರೆಗೆ ಜಾರಿದ್ದರು. ಬೆಳಗ್ಗೆ 5:15ರ ಸುಮಾರಿಗೆ ಯಮರೂಪಿಯಾಗಿ ಬಂದ ಕಾರ್ಗೋ ಗೂಡ್ಸ್ ರೈಲು ಹರಿದು ನಿದ್ರೆ ಮಂಪರಿನಲ್ಲಿದ್ದ ಕಾರ್ಮಿಕರನ್ನು ಶಾಶ್ವತವಾಗಿ ಮಲಗಿಸಿತು.

    ಇದನ್ನೂ ಓದಿ ತಬ್ಲಿಘಿಗಳಿಂದ ಹಿಂದು ಯುವಕ ಮತಾಂತರ

    ಬೇರೆಡೆ ಸಂಕಷ್ಟದಲ್ಲಿರುವ ತನ್ನ ರಾಜ್ಯದ ಕಾರ್ಮಿಕರನ್ನು ವಾಪಸ್ ಕರೆತರುವ ಸಲುವಾಗಿ ಮಧ್ಯಪ್ರದೇಶ ಸರ್ಕಾರ ಇತರ ರಾಜ್ಯಗಳೊಂದಿಗೆ ಮಾತುಕತೆ ನಡೆಸಲು ಮತ್ತು ಸಮನ್ವಯತೆಗಾಗಿ 7 ಐಎಎಸ್ ಅಧಿಕಾರಿಗಳ ತಂಡವನ್ನು ನಿಯೋಜಿಸಿದೆ. ಅದರಂತೆ ಮಹಾರಾಷ್ಟ್ರದಲ್ಲಿರುವ ಕಾರ್ಮಿಕರನ್ನು ಕರೆಸಿಕೊಳ್ಳುವ ಜವಾಬ್ದಾರಿಯನ್ನು ಬುಡಕಟ್ಟು ವ್ಯವಹಾರಗಳ ವಿಭಾಗದ ಪ್ರಧಾನ ಕಾರ್ಯದರ್ಶಿ, ಐಎಎಸ್ ಅಧಿಕಾರಿ ದೀಪಾಲಿ ರಾಸ್ತೋಗಿ ಅವರಿಗೆ ವಹಿಸಲಾಗಿದೆ. ಆದರೆ ಈ ತಂಡವು ನೆಪಮಾತ್ರಕ್ಕಿದೆ. ಈ ತಂಡವು ಫೋನ್ ಕರೆಗಳನ್ನೇ ಸ್ವೀಕರಿಸುವುದಿಲ್ಲ. ಅವರು ಸರಿಯಾಗಿ ಕರೆ ಸ್ವೀಕರಿಸಿ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಿದ್ದರೆ ಈ ಸಾವು ಸಂಭವಿಸುತ್ತಿರಲಿಲ್ಲ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

    ಈ ದುರಂತ ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್​ ಸಿಂಗ್ ಒತ್ತಾಯಿಸಿದ್ದಾರೆ. ವಲಸೆ ಕಾರ್ಮಿಕರ ನೋಂದಣಿ ಪ್ರಕ್ರಿಯೆ ಕೆಲಸವನ್ನು ಸರ್ಕಾರ ಮಾಡಿತ್ತೇ? ಕಾರ್ಮಿಕರನ್ನು ಕರೆತರಲು ಇಲ್ಲಿನ ಸರ್ಕಾರ ಕೈಗೊಂಡ ಕ್ರಮಗಳಾದರೂ ಎನು? ಎಂಬುದರ ಬಗ್ಗೆ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಉತ್ತರಿಸಬೇಕು ಎಂದು ಸಿಂಗ್ ಆಗ್ರಹಿಸಿದ್ದಾರೆ.

    ಇದನ್ನೂ ಓದಿ ‘ಕ್ವಾರಂಟೈನ್​ ಮುಗಿದ್ರೂ ನಮ್ಮನ್ನು ಕರ್ನಾಟಕಕ್ಕೆ ಕಳಿಸ್ತಿಲ್ಲ, ಹೊರಗೆ ಹೋದ್ರೆ ಲಾಠಿ ಎತ್ತುತ್ತಾರೆ’

    ಅಪ್ಪ ಬದುಕಿಲ್ಲ.. ಮಗು ಕಾಯುತ್ತಿದೆ!: ಮತ್ತೊಬ್ಬ ಮೃತ ಕಾರ್ಮಿಕ ದೀಪಕ್ ತಂದೆ ಅಶೋಕ್ ಸಿಂಗ್ ಮಾತನಾಡಿ, ನನ್ನ ಎರಡು ವರ್ಷದ ಮೊಮ್ಮಗ ಅಪ್ಪನಿಗಾಗಿ ಕಾಯುತ್ತಿದ್ದಾನೆ. ನನಗೆ ಸರ್ಕಾರದಿಂದ ಏನೂ ಬೇಡ. ಎಲ್ಲವನ್ನೂ ಕಳೆದುಕೊಂಡಿದ್ದೇನೆ” ಎಂದು ಕಣ್ಣೀರಿಡುತ್ತಿದ್ದ ದೃಷ್ಯ ಮನಕಲಕುವಂತಿತ್ತು.

    ಪಾಸ್ ಸಿಗಲಿಲ್ಲ, ಕಾಲ್ನಡಿಗೆಯಲ್ಲೇ ಹೊರೆಟೆವು: ಸ್ವಗ್ರಾಮಕ್ಕೆ ಹೋಗಲು ಪಾಸ್ ಬೇಕೆಂದು ವಾರದ ಹಿಂದೆಯೇ ಅರ್ಜಿ ಸಲ್ಲಿಸಿದ್ದೆವು. ಆದರೂ ಕೊಟ್ಟಿರಲಿಲ್ಲ. ಸಂಕಷ್ಟಕ್ಕೆ ಸಿಲುಕಿದ್ದ ನಾವು ತವರು ಜಿಲ್ಲೆ ಉಮಾರಿಯಾಗೆ ಕಾಲ್ನಡಿಗೆಯಲ್ಲೇ ಹೊರೆಟಿದ್ದೆವು. ಅಷ್ಟರಲ್ಲಿ ಈ ಅವಘಡ ಸಂಭವಿಸಿತು ಎಂದು ಕಾರ್ಮಿಕ ವೀರೇಂದ್ರ ಸಿಂಗ್ ಹೇಳಿದ್ದಾರೆ.

    ಮೃತ ಕಾರ್ಮಿಕ ರಾಜ್ ಬೊಮ್ರಾ ತಂದೆ ಪರಾಸ್ ಸಿಂಗ್ ಮಾತನಾಡಿ, ಮಗ ಮೃತಪಟ್ಟಿದ್ದಾಗಿ ಅಧಿಕಾರಿಗಳು ತಿಳಿಸಿದರು. ಆಡಳಿತ ವರ್ಗದ ನಿರ್ಲಕ್ಷ್ಯಕ್ಕೆ ಕಾರ್ಮಿಕರು ಬಲಿಯಾಗಿದ್ದಾರೆ. ನಮ್ಮ ಭಾಗದಲ್ಲಿ ಕೃಷಿ ಚಟುವಟಿಕೆ ಕಡಿಮೆ. ಬದುಕು ರೂಪಿಸಿಕೊಳ್ಳಲು ಜಾಲ್ನಾಗೆ ಹೋಗಿದ್ದರು. ಈಗ ಅವರ ಬದುಕೇ ಇಲ್ಲದಾಗಿದೆ ಎಂದು ದುಃಖ ತೋಡಿಕೊಂಡಿದ್ದಾರೆ.

    ಇದನ್ನೂ ಓದಿ ಅಡಮಾನ ಸಾಲ ಖರೀದಿ ಮಿತಿ ಏರಿಕೆ, ಹೊರ ರಾಜ್ಯಕ್ಕೆ ಸಾಗಿಸಲು ಅನುಮತಿ; ರೀಲರ್ಸ್, ಟ್ರೇಡರ್ಸ್ ಸಂತಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts