

ಸೊರಬ: ಕೊಲೆ ಮಾಡಿದ ನಂತರವೂ ಇಷ್ಟು ಆರಾಮವಾಗಿ ಇರಲು ಸಾಧ್ಯವೇ ಎಂದು ಈ ಘಟನೆ ನೋಡಿದ ನಂತರ ಆಶ್ಚರ್ಯವಾಗುತ್ತದೆ.
ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ನಿಸರಾಣಿ ಗ್ರಾಮದ ರಾಮಪ್ಪ ಹತ್ತು ವರ್ಷಗಳ ಹಿಂದೆ ಚಂದ್ರಕಲಾಳನ್ನು ವಿವಾಹವಾಗಿದ್ದ. ಪ್ರತಿನಿತ್ಯ ಕುಡಿದುಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ.
ಇದನ್ನೂ ಓದಿ: ಕಾಂಗ್ರೆಸ್ಸಿಗರಿಗೆ ಶಾಕ್ ನೀಡಿದ ಜಾರಿ ನಿರ್ದೇಶನಾಲಯ!
ಒಂದೂವರೆ ತಿಂಗಳಿಂದ ಲಾಕ್‌ಡೌನ್ ಇದ್ದ ಕಾರಣ ಕುಡಿಯಲು ಸಿಕ್ಕಿರಲಿಲ್ಲ. ಎಗಳವೂ ತಹಬಂದಿಗೆ ಬಂದಿತ್ತು. ಆದರೆ ಇತ್ತೀಚೆಗೆ ಮತ್ತೆ ಮದ್ಯ ಸಿಗಲು ಆರಂಭವಾದ ಬಳಿಕ ರಾಮಪ್ಪನಿಗೆ ಹಳೇ ಚಟ ಮತ್ತೆ ಆವರಿಸಿಕೊಂಡಿತು.ಮೇ 8ರಂದು ಕುಡಿದು ಬಂದು ಹೆಂಡತಿಯೊಂದಿಗೆ ಜಗಳವಾಡಿದ್ದಾನೆ. ಈ ವೇಳೆ ದಂಪತಿ ನಡುವೆ ಮಾತಿಗೆ ಮಾತು ಬೆಳೆದಿದೆ. ರಾಮಪ್ಪ ಕುಡಿದ ಅಮಲಿನಲ್ಲಿ ಪತ್ನಿ ಚಂದ್ರಕಲಾಳನ್ನು ಹತ್ಯೆ ಮಾಡಿಬಿಟ್ಟಿದ್ದಾನೆ.
ಆಶ್ಚರ್ಯಕರ ವಿಷಯವೇನೆಂದರೆ, ಕೊಲೆ ನಡೆದ ಬಳಿಕವೂ ಆತ ಏನೂ ನಡೆದಿಲ್ಲ ಎಂಬಂತೆ ಓಡಾಡಿಕೊಂಡಿದ್ದ. ಮನೆಯಲ್ಲೇ ಶವವಿಟ್ಟು ಕುಡಿದು ಬರುತ್ತಿದ್ದ ಎನ್ನಲಾಗಿದೆ. ಕೊನೆಗೆ ಅಕ್ಕಪಕ್ಕದ ಮನೆಯವರು ಗಮನಿಸಿದ ನಂತರ ಶನಿವಾರ ಈ ಕೊಲೆ ಬೆಳಕಿಗೆ ಬಂದಿದೆ! ಸೊರಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ರಾಮಪ್ಪನನ್ನು ಬಂಧಿಸಿದ್ದಾರೆ.