ಸ್ಥಳೀಯರಿಗೆ ಆದ್ಯತೆ ನೀಡಿ

4.ktal.01
ಬುದ್ದಿನ್ನಿ ಚಿನ್ನದಗಣಿಗೆ ತಹಸೀಲ್ದಾರ ಅಶೋಕ ಪವಾರ್ ಭೇಟಿ ನೀಡಿ ಕಂಪನಿ ಅಧಿಕಾರಿಗಳ ಜೊತೆ ಚರ್ಚಿಸಿದರು. ಕಂಪನಿಯ ಸಂಪನ್ಮೂಲ ಅಧಿಕಾರಿ ಸುರೇಶ ಹಟ್ಟಿ, ಗ್ರಾಮಸ್ಥರಾದ ಬಸನಗೌಡ, ಮಹೇಶ, ದುರುಗಣ್ಣ, ಶಿವಪ್ಪ, ಬಸವಲಿಂಗಪ್ಪ, ಗ್ರಾಮ ಲೆಕ್ಕಾಧಿಕಾರಿ ಸದಾಕಲಿ ಉಪಸ್ಥಿತರಿದ್ದರು.
Published on

ಕವಿತಾಳ: ಬುದ್ದಿನ್ನಿ ಚಿನ್ನದಗಣಿಗೆ ಭಾನುವಾರ ಸಿರವಾರ ತಹಸೀಲ್ದಾರ ಅಶೋಕ ಪವಾರ್ ಭೇಟಿ ನೀಡಿ ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದರು. ಕಂಪನಿಯಿಂದ ನಮಗೆ ತೊಂದರೆಯಾಗುತ್ತಿದೆ.

ಗಣಿಯಲ್ಲಿ ಸಿಡಿಮದ್ದನ್ನು ಸಿಡಿಸುವುದರಿಂದ ಮನೆಗಳು ಬಿರುಕು ಬಿಡುತ್ತಿವೆ. ಇದರ ಬಗ್ಗೆ ನಾವು ಕಂಪನಿಯವರಿಗೆ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ನಮಗೆ ಪರಿಹಾರ ಕೊಡಿಸಬೇಕು. ಗ್ರಾಮದಲ್ಲಿ ಕಂಪನಿ ಇದ್ದರು, ಸ್ಥಳೀಯರಿಗೆ ಕೆಲಸ ನೀಡುತ್ತಿಲ್ಲ,

ಗ್ರಾಮದ ಸ್ಥಳಾಂತರ ಮತ್ತು ಸ್ಥಳೀಯರಿಗೆ ಉದ್ಯೋಗ ಒದಿಗಿಸಲು ಸೂಚಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಕಂಪನಿ ಅಧಿಕಾರಿಗಳ ಜತೆ ಮಾತನಾಡಿದ ತಹಸೀಲ್ದಾರ್, ಗ್ರಾಮದ ಜನರ ಸಮಸ್ಯೆ ಪರಿಹರಿಸಬೇಕು, ಗ್ರಾಮ ಸ್ಥಳಾಂತರ ಮಾಡುವ ಕುರಿತು ಮೇಲಾಧಿಕಾರಿಗಳ ಜತೆ ಮಾತನಾಡಿ ಕ್ರಮ ಕೈಗೊಳ್ಳಿ.

ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಿ ಎಂದರು. ಕಂಪನಿಯ ಸಂಪನ್ಮೂಲ ಅಧಿಕಾರಿ ಸುರೇಶ ಹಟ್ಟಿ, ಗ್ರಾಮ ಲೆಕ್ಕಾಧಿಕಾರಿ ಸದಾಕಲಿ, ಗ್ರಾಮಸ್ಥರಾದ ಬಸನಗೌಡ, ಮಹೇಶ, ದುರುಗಣ್ಣ, ಬಸವಲಿಂಗಪ್ಪ, ಶಿವಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net