ಉತ್ತಮ ಆರೋಗ್ಯ ಆದ್ಯತೆಯಾಗಲಿ

Published on

ಸಿರಿಗೇರಿ: ದಾಸಪುರ ಗ್ರಾಮದ ಸ.ಹಿ.ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಶನಿವಾರ ಡೆಂಗೆ ಜಾಗೃತಿ ನಡೆಸಲಾಯಿತು.

ಆರ್‌ಬಿಎಸ್‌ಕೆ ವೈದ್ಯಾಧಿಕಾರಿ ಮಲ್ಲಿಕಾರ್ಜುನರೆಡ್ಡಿ ಮಾತನಾಡಿ, ಎಲ್ಲರೂ ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ಕೊಡಬೇಕು. ಪೌಷ್ಟಿಕ ಆಹಾರ ಸೇವನೆ ಮಾಡಬೇಕು.

ಜಂತುಹುಳು ಬಾಧೆ ತಡೆಯಲು ಚಿಕಿತ್ಸೆ ಪಡೆಯಬೇಕು. ಉತ್ತಮ ಆರೋಗ್ಯಕ್ಕೆ ಹೆಚ್ಚು ಒತ್ತು ಕೊಡಬೇಕೆಂದು ತಿಳಿಸಿದರು.

ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿ ಮೊಹಮ್ಮದ್ ಖಾಸಿಂ ಮಾತನಾಡಿ, ಡೆಂಗೆ ಜ್ವರ ಹರಡುವ ಸೊಳ್ಳೆಗಳ ನಿಯಂತ್ರಣ ಕುರಿತು ಮುಂಜಾಗ್ರತೆ ವಹಿಸಬೇಕು ಎಂದರು.

ರೋಗದ ಲಕ್ಷಣಗಳು ಹಾಗೂ ಅದಕ್ಕೆ ಚಿಕಿತ್ಸೆ ಪಡೆಯುವ ವಿಧಾನಗಳನ್ನು ತಿಳಿಸಿದರು. ಸೊಳ್ಳೆ ಉತ್ಪತ್ತಿ, ಮತ್ತು ಡೆಂೆ ಹರಡುವಿಕೆ ಕುರಿತು ವಿಡಿಯೋ ಪ್ರದರ್ಶಿಸಲಾಯಿತು.

ಪ್ರಭಾರ ಮುಖ್ಯಶಿಕ್ಷಕ ಅಂಬಣ್ಣ, ಆಶಾ ಕಾರ್ಯಕರ್ತೆಯರಾದ ಮಹಾಲಕ್ಷ್ಮೀ, ಸುನಿತಾ, ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net