

ಸುಬ್ರಹ್ಮಣ್ಯ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ಬಾಲವಿಕಾಸ ಸಮಿತಿ ಅಂಗನವಾಡಿರ್ವಾ ಕೇಂದ್ರ ಬಳ್ಳಕ್ಕ ಆಶ್ರಯದಲ್ಲಿ ಎಲ್ಕೆಜಿ, ಯುಕೆಜಿ ತರಗತಿಗಳ ಪ್ರಾರಂಭೋತ್ಸವ ಮತ್ತು ಪೋಷಣ್ ಅಭಿಯಾನ ಸೋಮವಾರ ಬಳ್ಳಕ್ಕ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು. ರೋಟರಿ ಕ್ಲಬ್ ಸುಬ್ರಹ್ಮಣ್ಯ ಮತ್ತು ಇನ್ನರ್ವ್ಹೀಲ್ ಕ್ಲಬ್ ಸುಬ್ರಹ್ಮಣ್ಯ ವತಿಯಿಂದ ಅಂಗನವಾಡಿ ಕೇಂದ್ರಕ್ಕೆ ಇಲೆಕ್ಟ್ರಿಕ್ ವೇಯಿಂಗ್ ಮಷಿನ್ ಕೊಡುಗೆಯಾಗಿ ನೀಡಲಾಯಿತು. ರೋಟರಿ ಪೂರ್ವಾಧ್ಯಕ್ಷ ಮಾಯಿಲಪ್ಪ ಸಂಕೇಸ ಮತ್ತು ಇನ್ನರ್ವ್ಹೀಲ್ ಕ್ಲಬ್ ಪೂರ್ವಾಧ್ಯಕ್ಷೆ ಸರೋಜಾ ಮಾಯಿಲಪ್ಪ ಅವರು ಶಾಸಕಿ ಭಾಗೀರಥಿ ಮುರುಳ್ಯ ಮತ್ತು ಅಂಗನವಾಡಿ ಮೇಲ್ವಿಚಾರಕಿ ದೀಪಿಕಾ ಅವರಿಗೆ ಹಸ್ತಾಂತರಿಸಿದರು.
ಗುತ್ತಿಗಾರು ಗ್ರಾಪಂ ಅಧ್ಯಕ್ಷೆ ಸುಮಿತ್ರಾ ಮೂಕಮಲೆ ಅಧ್ಯಕ್ಷತೆ ವಹಿಸಿದ್ದರು. ತಾಪಂ ಇಒ ರಾಜಣ್ಣ, ಶಿಶು ಅಭಿವೃದ್ಧಿ ಯೋಜನೆಯ ಸಿಡಿಪಿಒ ಶೈಲಜಾ, ಸುಬ್ರಹ್ಮಣ್ಯ ರೋಟರಿ ಪೂರ್ವಾಧ್ಯಕ್ಷ ಮಾಯಿಲಪ್ಪ ಸಂಕೇಸ, ಕಿಶೋರ್ ಕುಮಾರ್ ಕೂಜುಗೋಡು, ಕಾರ್ಯದರ್ಶಿ ಭವಾನಿಶಂಕರ ಪೂಂಬಾಡಿ, ಇನ್ನರ್ವ್ಹೀಲ್ ಕ್ಲಬ್ ಪೂರ್ವಾಧ್ಯಕ್ಷೆ ಸರೋಜಾ ಮಾಯಿಲಪ್ಪ, ಗ್ರಾಪಂ ಸದಸ್ಯರಾದ ಶಾರದಾ ಎಂ.ಕೆ., ಲತಾ ಕುಮಾರಿ ಆಜಡ್ಕ, ವಸಂತ ಮೊಗ್ರ, ಭರತ್, ಪಿಡಿಒ ಧನಪತಿ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಪವಿತ್ರಾ ಧನಂಜಯ ಮೊಗ್ರ, ಗುತ್ತಿಗಾರು ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರವೀಣ್ ಮುಂಡೋಡಿ, ಸೇವಾ ಸಂಗಮ ಟ್ರಸ್ಟ್ನ ಸಂಘಟನಾ ಕಾರ್ಯದರ್ಶಿ ಸುಜಿತ್ ಎಂ.ಎಸ್. ಉಪಸ್ಥಿತರಿದ್ದರು.
ದಾನಿಗಳಿಗೆ ಸನ್ಮಾನ
ಅಂಗನವಾಡಿ ಕೇಂದ್ರಕ್ಕೆ ವೇಯಿಂಗ್ ಮಷಿನನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ ಮೂಲಕ ಕೊಡುಗೆಯಾಗಿ ನೀಡಿದ ರೋಟರಿ ಪೂರ್ವಾಧ್ಯಕ್ಷ ಮಾಯಿಲಪ್ಪ ಸಂಕೇಸ ಮತ್ತು ಇನ್ನರ್ವ್ಹೀಲ್ ಕ್ಲಬ್ ಪೂರ್ವಾಧ್ಯಕ್ಷೆ ಸರೋಜಾ ಮಾಯಿಲಪ್ಪ, ಇತರ ಸಹಕಾರ ನೀಡಿದ ದಾನಿಗಳಾದ ಗ್ರೀಷ್ಮಾ ಕ್ಷಮಂತ್ ಕಡವೆಪಳ್ಳ, ಹಿರಣ್ಮಯ್, ಉದ್ಯಮಿ ದೇವಿಪ್ರಸಾದ್ ಚಿಕ್ಮುಳಿ, ಶಿಶಿಮಾ ಜಿತೇಶ್ ಜಾಕೆ, ಪ್ರಥಮ್, ಕಾರ್ತಿಕೇಯ ಅವರನ್ನು ಸನ್ಮಾನಿಸಲಾಯಿತು.