ಕಿಸಾನ್ ಸೇನೆ ಪುತ್ತಿಗೆ ಪಂಚಾಯಿತಿ ಸಮಿತಿ ಸಭೆ

New Project (52)
Published on

ಕುಂಬಳೆ: ಕಿಸಾನ್ ಸೇನೆ ಪುತ್ತಿಗೆ ಪಂಚಾಯಿತಿ ಸಮಿತಿ ಸಭೆ ಶುಕ್ರವಾರ ಬಾಲಸುಬ್ರಹ್ಮಣ್ಯ ಭಟ್ ಚೆಕ್ಕಿಣಿಕೆ ಅಧ್ಯಕ್ಷತೆಯಲ್ಲಿ ನಡೆಯಿತು.

ಪುತ್ತಿಗೆ ಕೃಷಿಭವನದ ವ್ಯಾಪ್ತಿಯ 200ಕ್ಕೂ ಹೆಚ್ಚು ರೈತರ ಉಚಿತ ವಿದ್ಯುತ್ ಮೋಟಾರ್ ಮೊತ್ತವನ್ನು ಕೃಷಿ ಭವನ ಪಾವತಿಸದ ಕಾರಣ ದೀರ್ಘಾವಧಿಯ ವಿದ್ಯುತ್ ಬಿಲ್ ಬಾಕಿಯಾಗಿದೆ. ಮೂವತ್ತು ಸಾವಿರದಿಂದ ಎಪ್ಪತ್ತು ಸಾವಿರ ರೂ.ಗಳಿಗಿಂತ ಹೆಚ್ಚಿನ ಬಿಲ್ ಪಾವತಿಸದವರ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಕೆಎಸ್‌ಇಬಿ ರೈತರಿಗೆ ಬೆದರಿಕೆ ಹಾಕುತ್ತಿದೆ. ಅಡಕೆ ಬೆಳೆಯನ್ನು ಬಾಧಿಸಿರುವ ಅಪರಿಚಿತ ರೋಗದಿಂದಾಗಿ ರೈತರು ಜೀವನ ನಿರ್ವಹಣೆಗೆ ಕಷ್ಟಪಡುತ್ತಿದ್ದಾರೆ. ಆದ್ದರಿಂದ ರೈತರ ಸಂಪೂರ್ಣ ಬಾಕಿ ಹಣವನ್ನು ಕೃಷಿ ಭವನವೇ ಪಾವತಿಸಬೇಕು ಮತ್ತು ವಿನಾಯಿತಿ ಪಡೆದ ರೈತರ ಬಿಲ್‌ಗಳನ್ನು ಕೃಷಿ ಭವನವೇ ಪಾವತಿಸುವುದನ್ನು ಮುಂದುವರಿಸಬೇಕು. ಪಂಚಾಯಿತಿ ಸ್ವಂತ ಹಣ ಬಳಸಿಕೊಂಡು ಅಡಕೆ ಬೆಳೆಗೆ ಉಚಿತವಾಗಿ ಔಷಧ ಸಿಂಪಡಿಸಬೇಕೆಂದು ಒತ್ತಾಯಿಸಲಾಯಿತು. ಈ ನಿಟ್ಟಿನಲ್ಲಿ ಜುಲೈ 9ರಂದು ಬೆಳಗ್ಗೆ 10.30ಕ್ಕೆ ಪುತ್ತಿಗೆ ಕೃಷಿ ಭವನಕ್ಕೆ ಮೆರವಣಿಗೆ ನಡೆಸಿ ಪ್ರತಿಭಟಿಸಲು ತೀ ರ್ಮಾನಿಸಲಾಯಿತು.

ಕಿಸಾನ್ ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶುಕ್ಕೂರ್ ಕಾನಾಜೆ ಸಭೆ ಉದ್ಘಾಟಿಸಿದರು. ಮುಹಮ್ಮದ್ ಹಾಜಿ ಕಂಡತ್ತಿಲ್, ಪ್ರಸಾದ್ ಕನಕಪಾಡಿ, ಡಾ.ರಾಜಶೇಖರ್, ಗಣಪತಿ ಭಟ್ ಅಡ್ಕತ್ತೊಟ್ಟಿ, ಎಂ.ಇಸ್ಮಾಯಿಲ್, ಸುರೇಶ್ ರೈ ಗುತ್ತು, ಶ್ಯಾಮ್ ಭಟ್, ಅಬ್ದುಲ್ಲ ಕಂಡತ್ತಿಲ್, ನಾರಾಯಣ ಭಟ್ ಕೋಡಿಮೂಲೆ ಮತ್ತು ಅಲಿ ಕಾನಾಜೆ ಮಾತನಾಡಿದರು. ಸುರೇಶ್ ಅಡ್ಕತ್ತೊಟ್ಟಿ ಸ್ವಾಗತಿಸಿದರು. ಸುಬ್ಬಣ್ಣ ರೈ ಗುತ್ತು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net