ಅಳ್ವೆಕೋಡಿ ನೆರೆ ಸಂತ್ರಸ್ತರ ಸಮಸ್ಯೆ ಆಲಿಕೆ

pdb (1)
Published on

ಪಡುಬಿದ್ರಿ: ಕಾಪು ತಾಲೂಕಿನ ತೆಂಕ ಎರ್ಮಾಳ್ ಗ್ರಾಮದ ಅಳ್ವೆಕೋಡಿ ಪ್ರದೇಶಕ್ಕೆ ತಹಸೀಲ್ದಾರ್ ಪ್ರತಿಭಾ ಆರ್. ಇತ್ತೀಚೆಗೆ ಭೇಟಿ ನೀಡಿದ್ದು, ನೆರೆ ನೀರಿನಲ್ಲೇ ನಡೆದುಕೊಂಡು ನಿತ್ಯವೂ ಸಾಗುವ ತಾರಾನಾಥ್ ಎಂಬುವರ ಕುಟುಂಬಕ್ಕೆ ನೆರವಿನ ಭರವಸೆ ನೀಡಿದರು.

ಸೋಮವಾರ ಸ್ವತಃ ತಹಸೀಲ್ದಾರ್ ಅವರು ಅಳ್ವೆಕೋಡಿಯ ತೋಡಿನಲ್ಲಿ ನಡೆದುಕೊಂಡು ಸಂತ್ರಸ್ತರ ಮನೆಗೆ ತೆರಳಿ ಕುಟುಂಬದ ಸಮಸ್ಯೆಗಳನ್ನು ಆಲಿಸಿದರು.

ಕಾಮಿನಿ ಹೊಳೆಗೆ ಸೇರುವ ಅಳ್ವೆಕೋಡಿ ತೋಡಿನಲ್ಲಿ ಪ್ರತಿವರ್ಷವೂ ಹೂಳು ತುಂಬುತ್ತಿರುವುದು ದೊಡ್ಡ ಸಮಸ್ಯೆಯಾಗಿದ್ದು, ಶಾಶ್ವತ ಪರಿಹಾರ ದೊರೆತಿಲ್ಲ. ಶಾಲಾ-ಕಾಲೇಜಿಗೆ ತೆರಳುವ ಮಕ್ಕಳು ಎದೆಮಟ್ಟದ ನೀರಿನಲ್ಲೇ ನಡೆದುಕೊಂಡು ತೆರಳಬೇಕಾದ ಅನಿವಾರ್ಯತೆ ಇದೆ. ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ತಾರಾನಾಥ್ ಕುಟುಂಬಸ್ಥರು ಮನವಿ ಮಾಡಿದರು.

ತಹಸೀಲ್ದಾರ್ ಪ್ರತಿಭಾ ಪೂರಕವಾಗಿ ಸ್ಪಂದಿಸಿದ್ದು, ಕಾಮಿನಿ ಹೊಳೆಯಲ್ಲಿ ಕಸ ಹಾಗೂ ಹೂಳು ಸಂಗ್ರಹದಿಂದ ಸಮಸ್ಯೆ ಸೃಷ್ಟಿಯಾಗಿರುವುದು ಗಮನಕ್ಕೆ ಬಂದಿದೆ. ಕಾಮಿನಿ ನದಿಯಲ್ಲಿ ಶೀಘ್ರವೇ ಸ್ವಚ್ಛತೆ ಕಾರ್ಯ ನಡೆಸುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net