ಡಬ್ಬಲ್‌ ಮರ್ಡರ್‌ ಮಾಡಿದ ಮಾಜೀ ಸೈನಿಕನಿಗೆ ಜೀವಾವಧಿ ಶಿಕ್ಷೆ

Murder-Ajay Prabhu Photo
Published on

ಕಾರವಾರ:ಅತ್ತಿಗೆ ಹಾಗೂ ಆಕೆಯ ಮಗನನ್ನು ಗುಂಡಿಟ್ಟು ಕೊಂದ ಡಬ್ಬಲ್‌ ಮರ್ಡರ್‌ ಅಪರಾಧಿಗೆ ಜೀವಾವಧಿ ಶಿಕ್ಷೆ ನೀಡಿ ಪ್ರಧಾನ  ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಅಂಕೋಲಾ ಮಠಾಕೇರಿಯ ಸುಬ್ರಾಯ ಅಚ್ಯುತ ಪ್ರಭು ಶಿಕ್ಷೆಗೊಳಗಾದವರು.
2019 ರ  ಜುಲೈ ನಲ್ಲಿ ಸುಬ್ರಾಯ ಪ್ರಭು ತನ್ನ ಸಹೋದರನ ಪತ್ನಿ ಮೇಧಾ ಹಾಗೂ ಮಗ ಅನೂಜ ನಿಗೆ ಗುಂಡು ಹಾರಿಸಿದ್ದ.

ಆಸ್ಪತ್ರೆ ಗೆ ಕೊಂಡೊಯ್ಯುವ ಮಾರ್ಗದಲ್ಲಿ ಇಬ್ಬರೂ ಮೃತಪಟ್ಟಿದ್ದರು.  ಜಾಗದ ವಿಷಯಕ್ಕೆ ಸಂಬಂಧಿಸಿದಂತೆ ದ್ವೇಷದಲ್ಲಿ ಸುಬ್ರಾಯ ಹೇಯ ಕೃತ್ಯ ಮಾಡಿದ್ದ.

ವಿಚಾರಣೆ ನಡೆಸಿದ್ದ  ಪ್ರಧಾನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶ ವಿಜಯಕುಮಾರ್ ಅವರು  ಸುಬ್ರಾಯ ಅಪರಾಧಿ ಎಂದು ವಾರದ ಹಿಂದೆ ತೀರ್ಪು ನೀಡಿದ್ದರು.
ಇದು ಅತ್ಯಂತ ಹೇಯ ಕೃತ್ಯವಾಗಿದ್ದು, ಅಪರಾಧಿಗೆ ಮರಣ ದಂಡನೆ ವಿಧಿಸುವಂತೆ ಸಾರ್ವಜನಿಕ ಅಭಿಯೋಜಕ ರಾಜೇಶ ಮಳಗಿಕರ್  ವಾದ ಮಂಡಿಸಿದ್ದರು.

ಜೈಲಿನಲ್ಲಿ ಸುಬ್ರಾಯ ಪ್ರಭು ವರ್ತನೆಯನ್ನು ಗಮಮನಿಸಿ, ಆತ ಸುಧಾರಿಸುವ ಸಾಧ್ಯತೆ ಇದೆ ಎಂಬ ಜೈಲರ್ ವರದಿಯನ್ನು ಆಧರಿಸಿ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ‌ 5.85 ಲಕ್ಷ ರೂ. ವಿಧಿಸಿ ಜಿಲ್ಲಾ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net