ಮುದ್ರಾಡಿಯಲ್ಲಿ ಕರುವನ್ನು ಕೊಂದು ಹಾಕಿದ ಚಿರತೆ: ಇಳಿ ಸಂಜೆಯ ವೇಳೆಯೇ ರಾಜಾರೋಷವಾಗಿ ದಾಳಿ

web - chirathe
Published on

ಹೆಬ್ರಿ: ಮುದ್ರಾಡಿ ಗ್ರಾಮದ ಭಕ್ರೆ ರಾಮ ಪೂಜಾರಿ ಎಂಬುವರ ಮನೆ ಕರುವನ್ನು ಚಿರತೆ ಕೊಂದು ಹಾಕಿರುವ ಘಟನೆ ಇತ್ತೀಚೆಗೆ ನಡೆದಿದೆ.

ಇಳಿ ಸಂಜೆಯ ವೇಳೆಯೇ ದಾಳಿ

ಸಂಜೆ ಬೆಳಕು ಇರುವಾಗಲೇ ಚಿರತೆ ದಾಳಿ ನಡೆಸಿದೆ. ಹೆಬ್ರಿ ತಾಲೂಕಿನ ಶಿವಪುರ ಗ್ರಾಮದ ಎಲಿಕೋಡು, ನಾಯರಕೋಡು, ಖಜಾನೆ, ಪಡುಕುಡೂರು, ಮುದ್ರಾಡಿ, ಕುಚ್ಚೂರು ಸೇರಿ ಹಲವೆಡೆ ನಿರಂತರವಾಗಿ ಚಿರತೆ ಸಂಚಾರ ಕಂಡು ಬಂದಿದೆ.

ಮುಖ್ಯರಸ್ತೆಯಲ್ಲೇ ಬಿಂದಾಸ್ ಹೆಜ್ಜೆ

ಕೆಲ ದಿನಗಳ ಹಿಂದೆ ವರಂಗ ಗ್ರಾಮದ ಪಡುಕುಡೂರು ಗೋಳಿಕಟ್ಟೆ ಎಂಬಲ್ಲಿ ಸಂಜೆ 4ಗಂಟೆ ಸುಮಾರಿಗೆ ಮುಖ್ಯರಸ್ತೆಯಲ್ಲೇ ಚಿರತೆ ಹೋಗಿದ್ದು, ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ನಾಯಿ, ಜಾನುವಾರುಗಳು ಚಿರತೆ ಪಾಲು

ಹಲವಾರು ಮಂದಿ ತಮ್ಮ ಮನೆಯ ನಾಯಿ, ಜಾನುವಾರುಗಳನ್ನು ಕಳೆದುಕೊಂಡಿದ್ದಾರೆ. ಇದರಿಂದಾಗಿ ಈ ಭಾಗದ ಜನರು ತಮ್ಮ ಸಾಕುಪ್ರಾಣಿಗಳನ್ನು ಚಿರತೆಯ ದಾಲಿಯಿಂದ ರಕ್ಷಿಸಲು ಹರಸಾಹಸ ಪಡುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net