ಮನೆ ಆವರಣಕ್ಕೆ ನುಗ್ಗಿದ ಚಿರತೆಯನ್ನು ಧೈರ್ಯದಿಂದಲೇ ಹಿಮ್ಮೆಟ್ಟಿಸಿದ ಶ್ವಾನ-ಯಜಮಾನ!

1257521
Published on

ಹಾಸನ: ರಾತ್ರಿಯಲ್ಲಿ ಮನೆ ಆವರಣದೊಳಕ್ಕೆ ಚಿರತೆಯೊಂದು ಬಂದಿದ್ದು, ಅದರೊಂದಿಗೆ ಮನೆಯ ಸಾಕುನಾಯಿ ಸೆಣಸಾಡಿ ಪ್ರಾಣ ಉಳಿಸಿಕೊಂಡಿರುವ ಘಟನೆಯೊಂದು ಶ್ರವಣಬೆಳಗೊಳದಲ್ಲಿ ನಡೆದಿದೆ.

ಮನೆ ಆವರಣದೊಳಕ್ಕೆ ಬಂದ ಚಿರತೆ, ಕೆಲವೇ ಕ್ಷಣಗಳಲ್ಲಿ ಸಾಕುನಾಯಿಯ ಮೇಲೆ ದಾಳಿ ಮಾಡಿ ತನ್ನ ದವಡೆಯ ಬಿಗಿಹಿಡಿತದಲ್ಲಿ ಕೊಂಡೊಯ್ಯಲು ಯತ್ನಿಸುತ್ತದೆ. ಆದರೆ ನಾಯಿ ಅದರೊಂದಿಗೆ ಹೋರಾಡಿ ಅದರ ಹಿಡಿತದಿಂದ ತಪ್ಪಿಸಿಕೊಳ್ಳುತ್ತದೆ.

ಅದಾಗ್ಯೂ ಚಿರತೆ ಮತ್ತೆ ಹಿಡಿಯಬೇಕು ಎನ್ನುವಷ್ಟರಲ್ಲಿ ಕೂಗಾಟ ಕೇಳಿದ ಮನೆ ಯಜಮಾನ ಹೊರಕ್ಕೆ ಬಂದವರೇ ಬರೀ ಟವೆಲ್ ಹಿಡಿದುಕೊಂಡೇ ಚಿರತೆಯನ್ನು ಓಡಿಸಲು ಮುಂದಾಗುತ್ತಾರೆ. ಚಿರತೆ ಮರಳಿ ದಾಳಿ ಮಾಡಿದ್ದರೆ ಇಬ್ಬರೂ ಶ್ವಾನ-ಯಜಮಾನ ಇಬ್ಬರೂ ಅಸಹಾಯಕರಾಗಿರುತ್ತಿದ್ದರು. ಆದರೂ ಧೈರ್ಯ ಕಳೆದುಕೊಳ್ಳದ ಯಜಮಾನ ಮನೆಯ ಗೇಟ್​ ವರೆಗೂ ಟವೆಲ್ ಬೀಸುತ್ತಲೇ ಹೋಗಿದ್ದು, ಚಿರತೆ ಅಲ್ಲಿಂದ ಓಡಿಹೋಗಿದೆ.

ಶ್ರವಣಬೆಳಗೊಳದ ವಿಂಧ್ಯಗಿರಿ ತಪ್ಪಲಿನ ಹಿಂಭಾಗದ ನಾಗಯ್ಯನ ಕೊಪ್ಪಲು ಗ್ರಾಮದ ಮಂಜೇಗೌಡ ಎಂಬುವರ ಮನೆಯಲ್ಲಿ ಇಂತಹ ಒಂದು ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮರಾದಲ್ಲಿ ಈ ದೃಶ್ಯಾವಳಿ ಸೆರೆಯಾಗಿದೆ. ಶ್ವಾನ ಹಾಗೂ ಮಂಜೇಗೌಡ ಅವರ ಧೈರ್ಯದ ಈ ಕ್ಷಣಗಳ ದೃಶ್ಯಾವಳಿಗೆ ಈಗ ಭಾರಿ ಮೆಚ್ಚುಗೆ ವ್ಯಕ್ತವಾಗಲಾರಂಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net