

ಕಾರ್ಕಳ: ನಿಟ್ಟೆಯ ಎನ್‌ಎಂಎಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ರಿನೀವೇಬಲ್ ಎನರ್ಜಿ ಕ್ಲಬ್ ನೇತೃತ್ವದಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದವರಿಗೆ ಮರುಬಳಕೆ ಮಾಡಬಲ್ಲ ಹಾಗೂ ಕಡಿಮೆ ವೆಚ್ಚದ ಹೈಡ್ರೋಜನ್ ಅನಿಲ ಸಂಗ್ರಹಣೆ, ಪೈಪ್‌ಲೈನ್‌ಗಳ ಅಭಿವೃದ್ಧಿ ಕುರಿತು ಉಪನ್ಯಾಸ ನಡೆಯಿತು.
ದಕ್ಷಿಣಕೊರಿಯಾದ ಸಿಯೋಲ್‌ನ ಹನ್ಯಾಂಗ್ ವಿಶ್ವವಿದ್ಯಾಲಯ ನಿರ್ದೇಶಕ ಡಾ.ಸುಂಗ್ ಕ್ಯೂ ಹಾ ಮರುಬಳಕೆಯ ಹೈಡ್ರೋಜನ್ ಅನಿಲ ಸಂಗ್ರಹಣೆ, ಪೈಪ್‌ಲೈನ್‌ಗಳ ಪ್ರಾಯೋಗಿಕ ಮತ್ತು ಸಿಮ್ಯುಲೇಶನ್ ತಂತ್ರಗಳ ಬಗ್ಗೆ ವಿವರಿಸುವುದರ ಜತೆಗೆ ಭವಿಷ್ಯದ ಸಂಶೋಧನಾ ಕಾರ್ಯ ವ್ಯಾಪ್ತಿ ಬಗ್ಗೆ ಮಾಹಿತಿ ನೀಡಿದರು.