ವಿಜಯವಾಣಿ ಸುದ್ದಿಜಾಲ ಬೈಂದೂರು
ಇಲ್ಲಿನ ಹೋಲಿಕ್ರಾಸ್ ಚರ್ಚ್‌ನ ಕೆಥೊಲಿಕ್ ಸಭಾ ಬೈಂದೂರು ಘಟಕದ ನೇತೃತ್ವದಲ್ಲಿ ಹಾಗೂ ಐಸಿವೈಎಂ ಯುವ ಸಂಘಟನೆ, ಸ್ತ್ರೀ ಸಂಘಟನೆ, ಚರ್ಚ್ ಆರೋಗ್ಯ ಆಯೋಗ ಸಮಿತಿ ಆಶ್ರಯದಲ್ಲಿ ಮತ್ತು ಕುಂದಾಪುರದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಹಭಾಗಿತ್ವದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಬೈಂದೂರು ಚರ್ಚ್‌ನಲ್ಲಿ ನಡೆಯಿತು.
ಧರ್ಮಗುರು ವಿನ್ಸೆಂಟ್ ಕುವೆಲ್ಲೊ ಶಿಬಿರ ಉದ್ಘಾಟಿಸಿದರು. ಪ್ರಥಮ ಚಿಕಿತ್ಸೆ ತರೇಬೇತುದಾರೆ ಡಾ.ಸೋನಿ ಡಿಕೋಸ್ತಾ ಆರೋಗ್ಯ ಹಾಗೂ ರಕ್ತದಾನದ ಮಾಹಿತಿ ನೀಡಿದರು. ಸಿಎ ಪರೀಕ್ಷೆಯಲ್ಲಿ ತೇರ್ಗಡೆಯಾದ ಬೈಂದೂರಿನ ನಿಕೋಲಾ ಡಯಾಸ್ ಅವರನ್ನು ಸನ್ಮಾನಿಸಲಾಯಿತು.
ಕುಂದಾಪುರ ರೆಡ್‌ಕ್ರಾಸ್ ಸಂಸ್ಥೆ ಸಭಾಪತಿ ಜಯಕರ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಶೇಖ್ ಫಾಯಜ್ ಆಲಿ, ರೆಡ್‌ಕ್ರಾಸ್ ಬೈಂದೂರು ಘಟಕದ ಸಭಾಪತಿ ನಿತೀನ್ ಶೆಟ್ಟಿ, ಶಿವರಾಮ ಶೆಟ್ಟಿ ಕುಂದಾಪುರ, ಡಾ.ರೋಶನ್ ಪಾಯಸ್, ಕೆಥೊಲಿಕ್ ಸಭಾ ಬೈಂದೂರು ಘಟಕ ಕಾರ್ಯದರ್ಶಿ ಅಲ್ಫ್ರೆಡ್ ರೆಬೇರೆ, ಸಿ.ಅನ್ಸಿ ಪಾವ್ಲ್, ವೀಣಾ ಫರ್ನಾಂಡಿಸ್, ಸ್ತ್ರೀ ಸಂಘಟನೆ ಅಧ್ಯಕ್ಷೆ ಫ್ಲಾವಿಯಾ ರೆಬೆಲ್ಲೊ, ಐಸಿವೈಎಂ ಯುವ ಸಂಘಟನೆ ಅಧ್ಯಕ್ಷೆ ರೂಬೆನ್ ನಜ್ರೆತ್ ಇದ್ದರು. ಕೆಥೊಲಿಕ್ ಸಭಾ ಅಧ್ಯಕ್ಷ ಪ್ರದೀಪ್ ಫರ್ನಾಂಡಿಸ್ ಸ್ವಾಗತಿಸಿದರು. ಆರೋಗ್ಯ ಆಯೋಗ ಸಮಿತಿಯ ಸಂಚಾಲಕಿ ಜೂಡಿತ್ ಲೋಬೊ ವಂದಿಸಿದರು. ಜೊಸ್ಪಿನ್ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.