

ಪುತ್ತೂರು ಗ್ರಾಮಾಂತರ: ಕೋಳಿ ಸಾಕಾಣಿಕೆ ಕಟ್ಟಡವೊಂದರ ಮೇಲೆ ಪಕ್ಕದ ಬರೆ ಕುಸಿದ ಪರಿಣಾಮ 5 ಸಾವಿರಕ್ಕೂ ಅಧಿಕ ಕೋಳಿಗಳು ಸಾವನ್ನಪ್ಪಿ, 5 ಲಕ್ಷಕ್ಕೂ ರೂ.ಅಧಿಕ ನಷ್ಟ ಸಂಭವಿಸಿದ ಘಟನೆ ಕೆದಂಬಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಠ ಎಂಬಲ್ಲಿ ಮಂಗಳವಾರ ನಡೆದಿದೆ.
ಕೆದಂಬಾಡಿ ಗ್ರಾಮದ ಮಠ ನಿವಾಸಿ ಚಂದ್ರಾವತಿ ರೈ ಅವರ ಕೋಳಿ ಸಾಕಾಣಿಕಾ ಕಟ್ಟಡದ ಮೇಲೆ ಕಟ್ಟಡದ ಒಂದು ಬದಿಯಲ್ಲಿರುವ ಬರೆ ಕುಸಿದು ಬಿದ್ದಿದೆ. ಕೋಳಿ ಸಾಕಾಣಿಕಾ ಕಟ್ಟಡ ಸಂಪೂರ್ಣ ಹಾನಿಗೊಂಡಿದ್ದು, ಕಟ್ಟಡದೊಳಗಿದ್ದ ಕೋಳಿಗಳು ಸಾವನ್ನಪ್ಪಿವೆ. ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಸುಜಾತ ಹಾಗೂ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.