ಸುಳ್ಯ: ಅಜ್ಜಾವರ ಗ್ರಾಮದ ಬಂಟ್ರಬೈಲು ಎಂಬಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 1 ಎಕರೆ 25 ಸೆಂಟ್ಸ್ ಜಾಗದ ಗಡಿಗುರುತು ಮಾಡಲಾಗಿದೆ. ಹಲವಾರು ವರ್ಷಗಳ ಹಿಂದೆಯೇ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿಯಿಂದ ಜಾಗ ಮಂಜೂರುಗೊಂಡಿತ್ತು. ಆದರೆ ಗಡಿ ಗುರುತು ಮಾಡಲು ಬಾಕಿ ಇದ್ದುದರಿಂದ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿ ಬಳಿಕ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿತ್ತು.
ಪರಿಣಾಮವಾಗಿ ಸುಳ್ಯ ತಹಶೀಲ್ದಾರ್ ಗ್ರಾಮ ಆಡಳಿತಾಧಿಕಾರಿ ಅವರಿಗೆ ಆದೇಶ ಮಾಡಿ ಮಂಜೂರುಗೊಂಡ ಜಾಗವನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗಡಿ ಗುರುತು ಮಾಡಿ ಸ್ಥಳವನ್ನು ಹಸ್ತಾಂತರ ಮಾಡಲಾಯಿತು.
ಸುಳ್ಯ ತಾಲೂಕು ಆರೋಗ್ಯ ಅಧಿಕಾರಿ ಡಾ.ನಂದಕುವಾರ್, ಅಜ್ಜಾವರ ಗ್ರಾಮ ಆಡಳಿತ ಅಧಿಕಾರಿ, ಶ್ರೀಕಲಾ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಉಮಾಶ್ರೀ, ಅಜ್ಜಾವರ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಲೀಲಾ ಮನಮೋಹನ್, ಪಂಚಾಯಿತಿ ಸದ್ಯಸರಾದ ರಾಹುಲ್ ಅಡ್ಪಂಗಾಯ, ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿ ಪ್ರಮೀಳಾ, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಅಬ್ಬಾಸ್ ಮೊದಲಾದವರಿದ್ದರು.