404 ಕೇಸ್, 185 ಜನ ಬಂಧನ

Arrest Kaidhi
Published on

ಬೆಳಗಾವಿ: ಮಾ.24ರಿಂದ ಮೇ 5ರ ನಡುವಿನ ಅವಧಿಯಲ್ಲಿ(ಲಾಕ್‌ಡೌನ್) ಅಬಕಾರಿ ಅಧಿಕಾರಿಗಳು ಬೆಳಗಾವಿ ವಿಭಾಗ ವ್ಯಾಪ್ತಿಯ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳ 3,340 ಕಳ್ಳಬಟ್ಟಿ ಅಡ್ಡೆಗಳ ಮೇಳೆ ದಾಳಿ ಮಾಡಿ 404 ಪ್ರಕರಣ ದಾಖಲಿಸಿದ್ದು, 185 ಜನರನ್ನು ಬಂಧಿಸಿದ್ದಾರೆ.

17,887 ಲೀ. ಮದ್ಯ, 106 ಲೀ. ಹೊರರಾಜ್ಯದ ಮದ್ಯ, 14,118 ಬಾಟಲ್ ಬಿಯರ್, 68 ಲೀ. ಸೇಂಧಿ, 80 ಲೀ. ಸಂತ್ರಾ, 98 ಲೀ. ಕಾಜು ಫೆನ್ನಿ, 2.5 ಲೀ. ನೀರು ಮಿಶ್ರಿತ ಸಾರಾಯಿ, 3,613 ಕಳ್ಳಬಟ್ಟಿ ಸಾರಾಯಿ, 4,825 ಲೀಟರ್ ಬೆಲ್ಲದ ಕೊಳೆ, 26.84 ಲೀ. ವೈನ್ ಹಾಗೂ 268 ಬೈಕ್, 16 ನಾಲ್ಕು ಚಕ್ರಗಳ ವಾಹನ ಜಪ್ಪಿ ಮಾಡಿಕೊಂಡಿದ್ದಾರೆ.

ಜಪ್ತಿ ಮಾಡಿರುವ ವಸ್ತುಗಳ ಮೌಲ್ಯ 1.46 ಕೋಟಿ ರೂ. ಹಾಗೂ ವಾಹನಗಳ ಅಂದಾಜು ಮೌಲ್ಯ 1.9 ಕೋಟಿ ರೂ. ಸೇರಿ ಒಟ್ಟು ಮೌಲ್ಯ 2.55 ಕೋಟಿ ರೂ. ಆಗಿದೆ ಎಂದು ಅಬಕಾರಿ ಜಂಟಿ ಆಯುಕ್ತ ಡಾ.ವೈ.ಮಂಜುನಾಥ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net