ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​​ ದೇಣಿಗೆ ಕೊಟ್ಟ ಬೆನ್ನಲ್ಲೇ ಎಚ್ಚೆತ್ತ ಬಿಜೆಪಿ ನಾಯಕರು!

BJP
Published on

ಬೆಳಗಾವಿ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ನಿಧಿಗೆ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ 2ಲಕ್ಷ ರೂ. ಕೊಟ್ಟಿರುವ ಬೆನ್ನಲ್ಲೆ ಬಿಜೆಪಿ ನಾಯಕರು ಎಚ್ಚೆತ್ತುಕೊಂಡಿದ್ದಾರೆ.

ಬೆಳಗಾವಿ ನಿಯತಿ ಫೌಂಡೇಶನ್ ಅಧ್ಯಕ್ಷೆ, ಕೇಂದ್ರ ಲಲಿತಕಲಾ ಅಕಾಡೆಮಿ ಸದಸ್ಯೆ, ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ನಿರ್ದೇಶಕಿ ಡಾ.ಸೋನಾಲಿ ಸರ್ನೋಬತ್ 5 ಲಕ್ಷ ರೂ. ಚೆಕ್ ಸಮರ್ಪಿಸಿದರು.

ನಗರದಲ್ಲಿ ಮಂಗಳವಾರ ವಿಶ್ವಹಿಂದೂ ಪರಿಷತ್ ಸಹಕೋಶಾಧ್ಯಕ್ಷ ಕೃಷ್ಣ ಭಟ್ ಅವರಿಗೆ 5 ಲಕ್ಷ ರೂ. ಚೆಕ್​ ಅನ್ನು ಡಾ.ಸೋನಾಲಿ ಸರ್ನೋಬತ್, ಡಾ.ಸಮೀರ್ ಸರ್ನೋಬತ್ ಹಸ್ತಾಂತರಿಸಿದರು.

ಸಚಿನ್ ಸರ್ನೋಬತ್. ಪಂಕಜಾ ಭಟ್, ಜಿಲ್ಲಾ ವ್ಯವಸ್ಥಾ ಪ್ರಮುಖ ವಿಶಾಲ ಖಂಡಾಗಳೆ, ನಗರ ಸಹಸೇವಾ ಪ್ರಮುಖ ದಿನೇಶ ಪಾಟೀಲ, ನಗರ ಸಂಪರ್ಕ ಪ್ರಮುಖ ಗುರುದತ್ತ ಕುಲಕರ್ಣಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net