

ಜೈಪುರ: ಪಕ್ಕದ ಮನೆಯ ಹುಡುಗಿಯನ್ನು ಪ್ರೀತಿಸುತ್ತಿದ್ದ ಯುವಕನೊಬ್ಬ ಆ ಹುಡುಗಿಗೆ ತಂದಿಟ್ಟ ಗತಿ ಕೇಳಿದರೆ ನೀವು ಬೆಚ್ಚಿ ಬೀಳುತ್ತೀರ. ಪ್ರೀತಿ ಹೇಳಿಕೊಂಡು ಒಟ್ಟಿಗೆ ಬದುಕಬೇಕಿದ್ದ ಯುವಕನ ಹಿಂದೆ ಇದೀಗ ಪೊಲೀಸರು ಬೀಳುವಂತಾಗಿದೆ.
ರಾಜಸ್ಥಾನದ ಭಾರತ್ಪುರ ವಾಸಿಯಾಗಿದ್ದ 19 ವರ್ಷದ ಯುವತಿ ಮನೆಯ ಟೆರೆಸ್ನಲ್ಲಿದ್ದ ಗಿಡಗಳಿಗೆ ನೀರು ಹಾಕಲೆಂದು ಮಂಗಳವಾರ ಬೆಳಗ್ಗೆ ಟೆರೆಸ್ ಮೇಲೆ ಬಂದಿದ್ದಾಳೆ. ಆಕೆ ನೀರು ಹಾಕುತ್ತಿರುವುದನ್ನು ಕಂಡು ಪಕ್ಕದ ಮನೆಯ ಟೆರೆಸ್ ಮೇಲಿದ್ದ ಯುವಕ ಬಿಲ್ಡಿಂಗ್ನಿಂದ ಹಾರಿ ಬಂದಿದ್ದಾನೆ. ತಕ್ಷಣವೇ ಆಕೆಯ ಮೇಲೆ ಗುಂಡು ಹಾರಿಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಅಂದ ಹಾಗೆ ಆ ಯುವತಿಯನ್ನು ಆತ ಒನ್ ಸೈಡ್ ಲವ್ ಮಾಡುತ್ತಿದ್ದನಂತೆ.
ಯುವತಿಯ ಕೊಲೆಯಾದಾಗಿನಿಂದ ಆರೋಪಿ ಕಾಣೆಯಾಗಿದ್ದಾನೆ. ಪ್ರೀತಿಸಿದ್ದ ಯುವತಿಯನ್ನು ಕೊಲೆ ಮಾಡಿರುವುದಕ್ಕೆ ಕಾರಣವೇನು ಎನ್ನುವುದು ತಿಳಿದುಬಂದಿಲ್ಲ. ಆರೋಪಿ ಸಿಕ್ಕ ನಂತರ ಇನ್ನಷ್ಟು ವಿಚಾರಣೆ ಹೊರಬೀಳುವ ಸಾಧ್ಯತೆಯಿದೆ. ಸದ್ಯ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. (ಏಜೆನ್ಸೀಸ್)