ಕಾಯರ್ತೋಡಿ ದೀಪೋತ್ಸವಕ್ಕೆ ಭಜನೆ ಮೆರುಗು

Published on

ಸುಳ್ಯ: ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವರ ಸನ್ನಿಧಿಯಲ್ಲಿ ಕಾರ್ತಿಕ ಮಾಸದ ಒಂದು ತಿಂಗಳ ಕಾಲ ನಡೆದ ದೀಪೋತ್ಸವ ಸಂಪನ್ನಗೊಂಡಿದ್ದು, ಸೋಮವಾರ ಕಾರ್ತಿಕ ದೀಪೋತ್ಸವಕ್ಕೆ ಭಜನೆ ಮೆರುಗು ವಿಶೇಷವಾಗಿತ್ತು.

ದೇವಸ್ಥಾನದ ಪ್ರಧಾನ ಅರ್ಚಕ ನೀಲಕಂಠ ಭಟ್ ನೇತೃತ್ವದಲ್ಲಿ ಕಾರ್ತಿಕ ದೀಪೋತ್ಸವಕ್ಕೆ ಚಾಲನೆ ನೀಡಲಾಗಿತ್ತು. ಸಂಜೆ ವೇಳೆ ನಡೆದ ದೀಪೋತ್ಸವಕ್ಕೆ ಪ್ರತಿದಿನ ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆ ನೆರವೇರಿತು.

ರಾತ್ರಿ ದೇವರಿಗೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಕಾರ್ತಿಕ ದೀಪೋತ್ಸವ ಪ್ರಯುಕ್ತ 40 ಭಜನಾ ತಂಡಗಳಿಂದ ಭಜನಾ ಸೇವೆ ನಡೆಯಿತು.

ದೇವಾಲಯದ ಪ್ರಧಾನ ಅರ್ಚಕ ನೀಲಕಂಠ ಭಟ್, ಆಡಳಿತಾಧಿಕಾರಿ, ಉಪ ತಹಸೀಲ್ದಾರ್ ಚಂದ್ರಕಾಂತ್ ಎಂ.ಆರ್., ಕಾರ್ತಿಕ ದೀಪೋತ್ಸವ ಸಮಿತಿ ಸಂಚಾಲಕ ಚಂದ್ರಶೇಖರ ಅಡ್ಪಂಗಾಯ, ಸೇವಾ ಸಮಿತಿ ಸಂಚಾಲಕ ನವೀನ ಕುದ್ಪಾಜೆ, ಮಾಜಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ, ಪಿ.ಕೆ.ಉಮೇಶ್, ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರು ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net