ಭುವನೇಂದ್ರ ಪುದುವೆಟ್ಟು ಅತ್ಯುತ್ತಮ ಕೆಲಸಗಾರ; ನುಡಿನಮನ ಸಲ್ಲಿಸಿ ಡಾ.ಯು.ಪಿ.ಶಿವಾನಂದ ಉಲ್ಲೇಖ

IMG-20241202-WA0046
Published on

ಮಂಗಳೂರು: ಪತ್ರಿಕಾ ರಂಗದಲ್ಲಿ ಭುವನ್ ಅವರದು ದೈತ್ಯ ಪ್ರತಿಭೆ. ಅವರು ಅತ್ಯುತ್ತಮ ಕೆಲಸಗಾರರಾಗಿದ್ದರು. ಸಂಸ್ಥೆಯ ಕೆಲಸದಲ್ಲಿ ಅವರು ಸಮರ್ಪಣಾ ಭಾವದಿಂದ ತೊಡಗಿಸಿಕೊಳ್ಳುತ್ತಿದ್ದರು ಎಂದು 'ಸುದ್ದಿ' ಮಾಧ್ಯಮ ಸಮೂಹ ಸಂಸ್ಥೆಯ ಮುಖ್ಯಸ್ಥ ಡಾ.ಯು.ಪಿ.ಶಿವಾನಂದರ ಅವರು ಹೇಳಿದರು.

'ವಿಜಯವಾಣಿ' ಮಂಗಳೂರು ಆವೃತ್ತಿಯ ಮಾಜಿ ಹಿರಿಯ ಮುಖ್ಯ ಉಪಸಂಪಾದಕ ಭುವನೇಂದ್ರ ಪುದುವೆಟ್ಟು ಅವರು ಕಳೆದ ನವೆಂಬರ್ 19 ರಂದು ನಿಧನರಾಗಿದ್ದು, ಅವರ ಧರ್ಮಸ್ಥಳ ಪುದುವೆಟ್ಟು ಕಾಯರಂಡ ನಿವಾಸದಲ್ಲಿ ಭಾನುವಾರ ಉತ್ತರಕ್ರಿಯೆ ಸಂದರ್ಭ ಡಾ.ಯು.ಪಿ.ಶಿವಾನಂದ ಅವರು ನುಡಿನಮನ ಸಲ್ಲಿಸಿದರು.

ವಿಜಯವಾಣಿ ಪತ್ರಿಕೆಯ ಬಳಿಕ ನಮ್ಮ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಮ್ಮ ಪತ್ರಿಕೆಯ ಬೆಳ್ತಂಗಡಿ ಮುಖ್ಯ ವರದಿಗಾರರಾಗಿ ದುಡಿಯುತ್ತಿದ್ದರು. ಆದರೆ ಕ್ರಿಯಾಶೀಲ ಮತ್ತು ಸ್ನೇಹಶೀಲ ವ್ಯಕ್ತಿತ್ವದಿಂದ ಭುವನ್ ಅವರು ನಮ್ಮ ಎಲ್ಲರ ಪ್ರೀತಿಪಾತ್ರರಾಗಿದ್ದರು ಎಂದು ಅವರು ಹೇಳಿದರು.

ದಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಪ್ರೆಸ್ ಕ್ಲಬ್ ಕಾರ್ಯದರ್ಶಿ ಪುಷ್ಪರಾಜ್ ಬಿ.ಎನ್ ಸ್ಥಳಕ್ಕೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net