

ಬಂಟ್ವಾಳ: ಕುಪ್ಪೆಟ್ಟು ಪಂಜುರ್ಲಿ ಮೂಲಸ್ಥಾನದ ದೈವಗಳ ಪ್ರತಿಷ್ಠಾಪನಾ ಮಹೋತ್ಸವ ಫೆ.18ರಿಂದ 22ರವರೆಗೆ ಜರುಗಲಿದ್ದು, ಇದರ ಆಮಂತ್ರಣ ಶಾಸಕ ರಾಜೇಶ್ ನಾಕ್ ಇತ್ತೀಚಿಗೆ ಸಿದ್ದಕಟ್ಟೆ ನಾರಾಯಣ ಗುರು ಮಂದಿರದಲ್ಲಿ ಬಿಡುಗಡೆಗೊಳಿಸಿದರು. ಗೀತಾಂಜಲಿ ಸುವರ್ಣ ಮಾತನಾಡಿದರು. ಪ್ರತಿಷ್ಠಾಪನಾ ಮಹೋತ್ಸವ ಸಮಿತಿ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಆಡಳಿತ ಸಮಿತಿ ಅಧ್ಯಕ್ಷ ಹರೀಶ್ ಸನೀಲ್ ಕುಪ್ಪೆಟ್ಟು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಭಾಕರ ಪ್ರಭು ಹೊರೆಕಾಣಿಕೆ ಸಮಿತಿ ಸಂಚಾಲಕ ದೇವಪ್ಪ ಕರ್ಕೇರ, ಪ್ರಮುಖರಾದ ರತ್ನಕುಮಾರ್ ಚೌಟ, ರಶ್ಮಿತ್ ಶೆಟ್ಟಿ, ನಿತ್ಯಾನಂದ ಪೂಜಾರಿ ಕೆಂತಲೆ, ಸತೀಶ್ ಪೂಜಾರಿ, ಸಂತೋಷ ರಾಯಿಬೆಟ್ಟು ಸಂತೋಷ ಕುಮಾರ್ ಚೌಟ ಸಿದ್ದಕಟ್ಟೆ, ಚಂದ್ರಹಾಸ ಶೆಟ್ಟಿಗಾರ್ ಸಂಗಬೆಟ್ಟು, ವಾಮನ ಬುಣ್ಣನ್, ಪರಮೇಶ್ವರ್ ಪೂಜಾರಿ ರಾಯಿ, ಜಗದೀಶ್ ಕೊಯಿಲ, ರಾಜೇಂದ್ರ ಪೂಜಾರಿ, ಜಯ ಪೂಜಾರಿ ಕುಪ್ಪೆಟ್ಟು, ಉಮೇಶ್ ಪೂಜಾರಿ ಕುಪ್ಪೆಟ್ಟು, ನವೀನ್ ಪೂಜಾರಿ, ರತ್ನಾಕರ್ ಪೂಜಾರಿ, ಪ್ರವೀಣ್ ಕುಪ್ಪೆಟ್ಟು ಉಪಸ್ಥಿತರಿದ್ದರು. ಪ್ರಚಾರ ಸಮಿತಿ ಸಂಚಾಲಕ ದಿನೇಶ್ ಸುವರ್ಣ ರಾಯಿ ನಿರೂಪಿಸಿದರು.