blank

ಉಜಿರೆಯಲ್ಲಿ ಅಂತಾರಾಷ್ಟ್ರೀಯ ವಿಚಾರ ಸಂಕಿರಣ : ಜ.17, 18ರಂದು ಆಯೋಜನೆ

ಬೆಳ್ತಂಗಡಿ : ಪ್ರವರ್ಧಿತ ಆರ್ಥಿಕತೆಯಲ್ಲಿ ಗ್ರಾಮೀಣ ಉದ್ಯಮಶೀಲತೆ ಪಾತ್ರ ಎಂಬ ವಿಚಾರದ ಬಗ್ಗೆ ಉಜಿರೆಯ ಎಸ್‌ಡಿಎಂ ಕಾಲೇಜಿನ ಅರ್ಥಶಾಸ್ತ್ರ ಹಾಗೂ ಗ್ರಾಮೀಣ ಅಭಿವೃದ್ಧಿ ವಿಭಾಗದ ವತಿಯಿಂದ ಜ. 17 ಹಾಗೂ 18ರಂದು ಅಂತಾರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ ಎಂದು ಉಜಿರೆ ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ. ಬಿ.. ಕುಮಾರ ಹೆಗ್ಡೆ ಹೇಳಿದರು.

ಸೋಮವಾರ ಕಾಲೇಜಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಂದ್ರಪ್ರಸ್ಥ ಸಭಾಂಗಣದಲಿ 17ರಂದು ಬೆಳಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ. ಆಸ್ಟ್ರೇಲಿಯಾ ನ್ಯಾಷನಲ್ ವಿಶ್ವವಿದ್ಯಾಲಯದ ಡಾ. ಕಾಲಿಯಪ್ಪ ಕಾಲಿರಾಜನ್ ಹಾಗೂ ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಎಸ್.ಸತೀಶ್ಚಂದ್ರ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕರ್ನಾಟಕದ ಒಂಬುಡ್ಸ್‌ಮನ್ ಡಾ.ಬಾಲು ಕೆಂಚಪ್ಪ, ಉದ್ಯಮಿ ಶಶಿಧರ ಶೆಟ್ಟಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಪ್ರಿನ್ಸಿಪಾಲ್ ಡಾ. ಬಿ.. ಕುಮಾರ್ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ವಿವಿ ಅರ್ಥಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಹಾಗೂ ರಾಜ್ಯ ಯೋಜನಾ ಆಯೋಗದ ಸದಸ್ಯ ಡಾ.ಜಿ.ವಿ.ಜೋಷಿ, ಮೈಸೂರು ಎಸ್‌ಡಿಎಂ ಮ್ಯಾನೇಜ್‌ಮೆಂಟ್ ಸಂಸ್ಥೆಯ ಡಾ.ವೆಂಕಟರಾಜು, ಎಸ್‌ಕೆಡಿಆರ್‌ಡಿಪಿ ನಿರ್ದೇಶಕ ಅನಿಲ್ ಕುಮಾರ್ ಎಸ್. ಎಸ್., ನವದೆಹಲಿಯ ಜೆಎನ್‌ಯು ಸಂಸ್ಥೆಯ ಡಾ. ರಮೇಶ್ ಸಾಲಿಯಾನ್, ನಿಟ್ಟೆ ವಿವಿಯ ಡಾ ಎ.ಪಿ. ಆಚಾರ್, ಶಿವಮೊಗ್ಗದ ನಿವೇದನ್ ನೆಂಪೆ, ನಿಡ್ಲೆಯ ಉದ್ಯಮಿ ಆತಿಷ್ಯ ಜೈನ್ ಉಪನ್ಯಾಸ ನೀಡಲಿದ್ದಾರೆ.

ಬೆಂಗಳೂರಿನ ಐಎಸ್‌ಇಸಿ ಸಂಸ್ಥೆಯ ಪ್ರೊ. ಎಸ್.ಮಹದೇಶ್ವರನ್, ಎಸ್‌ಡಿಎಂ ಕಾಲೇಜಿನ ನಿವೃತ್ತಿ ಪ್ರಾಂಶುಪಾಲ ಡಾ. ಜಯಕುಮಾರ್ ಶೆಟ್ಟಿ, ಮೈಸೂರಿನ ಜೆಎಸ್‌ಎಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಕೇಶ್ ಟಿ.ಎಸ್. ಸಂಶೋಧನಾ ಪ್ರಬಂಧ ಮಂಡನೆ ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

18ರಂದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ರಾಜ್ಯ ಸರ್ಕಾರದ ಅಸೆಟ್ ಮೊನಿಟೈಸೇಷನ್ ತಜ್ಞ ಸಮಿತಿ ಸದಸ್ಯ ಪ್ರೊ. ಕೃಷ್ಣರಾಜ್ ಸಮಾರೋಪ ಭಾಷಣ ಮಾಡಲಿದ್ದಾರೆ. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹಷೇರ್ಂದ್ರ ಕುಮಾರ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಸಿರಿ ಗ್ರಾಮೋದ್ಯೋಗ ಸಂಸ್ಥೆ ನಿರ್ದೇಶಕ ಕೆ.ಎನ್.ಜನಾರ್ದನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ 40ಕ್ಕೂ ಅಧಿಕ ಸಂಶೋಧನಾ ನಿರತರು ಪ್ರಬಂಧ ಮಂಡಿಸಲಿದ್ದಾರೆ. ದೇಶದೆಲ್ಲೆಡೆಯಿಂದ 250-300 ಸಂಶೋಧನಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ವಿಭಾಗ ಮುಖ್ಯಸ್ಥ ಡಾ. ಗಣರಾಜ್, ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ಡಾ. ಮಹೇಶ್ ಶೆಟ್ಟಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ್ ಹೆಗಡೆ, ವಿದ್ಯಾರ್ಥಿಗಳಾದ ಶ್ರೇಷ್ಠಾ ಹಾಗೂ ಅನಿಲ್ ಉಪಸ್ಥಿತರಿದ್ದರು.

ಸಮಸ್ಯೆ ನಿವಾರಿಸಲು ಖುದ್ದು ಪರಿಶೀಲನೆ : ಶಾಸಕ ರಾಜೇಶ್ ನೈಾಕ್ ಉಳಿಪ್ಪಾಡಿಗುತ್ತು ಭರವಸೆ ಕೊರಗರ ಕುಂದು-ಕೊರತೆ ಸಭೆ

ವಿವೇಕಾನಂದರ ವಿಚಾರಗಳು ಉಜ್ವಲ – ಜಯಂತಿ ಉದ್ಘಾಟಿಸಿ ಡಾ.ಜಿ.ಬಿ.ಹರೀಶ ಹೇಳಿಕೆ

Share This Article

ಈ ಆರೋಗ್ಯ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ತುಪ್ಪವನ್ನು ತಿನ್ನಲೇ ಬಾರದು ಗೊತ್ತಾ? ghee benefits and risks

ಬೆಂಗಳೂರು: ( ghee benefits and risks) ಹಾಲಿನ ಉತ್ಪನ್ನಗಳು ಆರೋಗ್ಯಕ್ಕೆ ಒಳ್ಳೆಯದು.  ತುಪ್ಪ ಹಲವು…

ಬಿಸಿಲಿನ ವಾತಾವರಣದಲ್ಲಿ ನಿಮ್ಮ ಕಾರಿನೊಳಗೆ ತಂಪಾಗಿರಲು ಬಯಸುವಿರಾ? ಈ ಟ್ರಿಕ್ ಟ್ರೈ ಮಾಡಿ.. Summer Car Tips

ಬೆಂಗಳೂರು: (Summer Car Tips ) ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಿಸಿಲಿಇಂದ ರಕ್ಷಣೆ ಪಡೆಯಲು…

ಹಠಾತ್ತನೆ ಮದ್ಯಪಾನ ತ್ಯಜಿಸುವುದರಿಂದ ಸಾಯ್ತಾರಾ? ಆಲ್ಕೋಹಾಲ್​ ಬಿಡುವುದಾದ್ರೂ ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ… | Alcohol

Alcohol: ಮದ್ಯಪಾನದಿಂದ ಉಂಟಾಗುವ ಸಾವುಗಳ ಕುರಿತು ಬ್ರಿಟನ್​ನ ರಾಷ್ಟ್ರೀಯ ಅಂಕಿ ಅಂಶಗಳ ಕಚೇರಿ(ONS) ಅಘತಕಾರಿ ಅಂಕಿ…