ಕುಕ್ಕಂಗೋಡ್ಲು ಜಾತ್ರಾ ಮಹೋತ್ಸವ ಸಂಪನ್ನ

New Project (10)
Published on

ಬದಿಯಡ್ಕ: ನೀರ್ಚಾಲು ಸಮೀಪದ ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಕುಕ್ಕಂಗೋಡ್ಲು ಸನ್ನಿಧಿಯಲ್ಲಿ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ, ಮೊಕ್ತೇಸರ ಕೆ.ಜಿ.ಗೌರೀಶಂಕರ ರೈಗಳ ಸಹಕಾರದೊಂದಿಗೆ ಕಿರುಷಷ್ಠಿ ಹಾಗೂ ಜಾತ್ರಾ ಮಹೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು. ಜ.27ರಂದು ಪ್ರತಿಷ್ಠಾಪನಾ ದಿನದ ಅಂಗವಾಗಿ ಬೆಳಗ್ಗೆ 6ಕ್ಕೆ ಗಣಪತಿಹೋಮ, 11ಕ್ಕೆ ನವಕಾಭಿಷೇಕ, 11.30ಕ್ಕೆ ರಕ್ತೇಶ್ವರಿ ತಂಬಿಲ ಸೇವೆ, 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ, ರಾತ್ರಿ 7ಕ್ಕೆ ಕಾರ್ತಿಕೋತ್ಸವ ಸೇವೆ, ಪ್ರಸಾದ ವಿತರಣೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net