

ವಿಜಯವಾಣಿ ಸುದ್ದಿಜಾಲ ಕಡಬ
ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಆಚರಣೆ ಅಂಗವಾಗಿ ಭಾನುವಾರ ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರಗೋಷ್ಠಿ ನಡೆಯಿತು. ವಿಚಾರಗೋಷ್ಠಿಯಲ್ಲಿ ಸ್ವ ಉದ್ಯೋಗದ ಕುರಿತು ಮಾಹಿತಿ ನೀಡಿದ ಉಜಿರೆ ರುಡ್ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಾಹಂ ಜೇಮ್ಸ್, ಧೈರ್ಯ ಮತ್ತು ವಿಶ್ವಾಸವಿದ್ದರೆ ಸ್ವಉದ್ಯೋಗ ಕ್ಷೇತ್ರದಲ್ಲಿ ಯಶಸ್ವಿಯಾಗಲು ಸಾಧ್ಯವಿದೆ. ಉದ್ಯಮ ಸೃಷ್ಟಿಸುವ ಕನಸು ಹೊತ್ತು ಬಂದ ಸಾವಿರಾರು ಯುವಕರಿಗೆ ರುಡ್ಸೆಟ್ ಸಂಸ್ಥೆ ನವಜೀವನ ರೂಪಿಸಿದೆ ಎಂದರು. ಕಾಣಿಯೂರು ಮಠದ ಮ್ಯಾನೇಜರ್ ನಿಧಿ ಆಚಾರ್ಯ, ಉದ್ಯಮಿ ವಿಶ್ವನಾಥ ಗೌಡ ಅಂಬುಲ, ಮರ್ಧಾಳ ಶ್ರೀ ಜನನಿ ಫ್ಯಾಷನ್ ವರ್ಲ್ಡ್ ಮಾಲಕಿ ಸುಜಾತ ದಿನೇಶ್ ಕುಂದಾರ್ ಅತಿಥಿಗಳಾಗಿ ಶುಭಹಾರೈಸಿದರು. ಸಂಘದ ಸಿಇಒ ಅಶೋಕ್ ಗೌಡ ಉಪಸ್ಥಿತರಿದ್ದರು. ಚಾರ್ವಾಕ ಕೃ.ಪ.ಸ.ಸಂ.ಅಧ್ಯಕ್ಷ ಗಣೇಶ್ ಕೆ.ಎಸ್.ಉದನಡ್ಕ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ನಿರ್ದೇಶಕ ಪರಮೇಶ್ವರ ಗೌಡ ಅನಿಲ ವಂದಿಸಿದರು. ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಧನಂಜಯ ಕೇನಾಜೆ, ರವಿಶಂಕರ್ ಎನ್.ಟಿ., ನಿರೂಪಿಸಿದರು. ಸ್ಥಳಿಯ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಚಾರ್ವಾಕ ಕೃ.ಪ.ಸ.ಸಂ.ಮಾಜಿ ಅಧ್ಯಕ್ಷ ಧರ್ಮೇಂದ್ರ ಕಟ್ಟತ್ತಾರು ಚಾಲನೆ ನೀಡಿದರು. ಕಾಣಿಯೂರು ಗ್ರಾ.ಪಂ ಅಧ್ಯಕ್ಷ ವಿಶ್ವನಾಥ ಕೊಪ್ಪ, ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಗೌಡ ಇಡ್ಯಡ್ಕ, ನಿರ್ದೇಶಕರಾದ ಅನಂತ ಕುಮಾರ್ ಬೈಲಂಗಡಿ, ವಿಶ್ವನಾಥ ಕೂಡಿಗೆ, ಸುಂದರ ಗೌಡ ದೇವಸ್ಯ, ಪರಮೇಶ್ವರ ಗೌಡ ಅನಿಲ, ಲೋಕೇಶ್ ಗೌಡ ಆತಾಜೆ, ರಮೇಶ್ ಉಪ್ಪಡ್ಕ, ದಿವಾಕರ ಮರಕ್ಕಡ, ಶೀಲಾವತಿ ಮುಗರಂಜ, ವೀಣಾ ಅಂಬುಲ, ರತ್ನಾವತಿ ಮುದುವ, ಸಿಬ್ಬಂದಿ ವಾಣಿ, ಭವತ್, ವಸಂತಿ, ಪುನೀತ್, ವಿನಯ್, ದುರ್ಗಾಪ್ರಸಾದ್, ಕೀರ್ತಿಕುಮಾರ್, ವೇಣುಗೋಪಾಲ್. ಕೇಶವ ಗೌಡ ಮೊದಲಾದವರು ಉಪಸ್ಥಿತರಿದ್ದರು.