ಆತ್ಮಾಭಿಮಾನ ಮೂಡಿಸಿದ ಸಂತ : ಹರೀಶ್ ಬಂಟ್ವಾಳ್ ಹೇಳಿಕೆ ವಿವೇಕಾನಂದ ಜಯಂತಿ ಆಚರಣೆ

Sul_Vivekananda
Published on

ಸುಳ್ಯ: ಎಲ್ಲರಿಗೂ ಆತ್ಮಾಭಿಮಾನವನ್ನು ಮೂಡಿಸಿದಂಥ ಸಂತ ಸ್ವಾಮಿ ವಿವೇಕಾನಂದರು. ಇಡೀ ಭಾರತವನ್ನು ಸುತ್ತಿ ಚಿಂತನೆಯ ಮುಖಾಂತರ ದೇಶದಲ್ಲಿ ಸುಧಾರಣೆ ಮಾಡಿದ್ದಾರೆ. ಯುವ ಜನರಿಗೆ ಸ್ಫೂರ್ತಿ ತುಂಬಿದ್ದಾರೆ. ಅವರ ಆದರ್ಶಗಳು ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಹೇಳಿದರು.

ನಗರದ ವಿವೇಕಾನಂದ ವೃತ್ತದ ಬಳಿ ಸ್ವಾಮಿ ವಿವೇಕಾನಂದ ಪ್ರತಿಮೆ ನಿರ್ಮಾಣ ಸಮಿತಿ ವತಿಯಿಂದ ಭಾನುವಾರ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆಯಲ್ಲಿ ಮಾತನಾಡಿದರು.

ಸುಳ್ಯದ ಸೇವಾ ಭಾರತಿ ಹೆಲ್ಪ್‌ಲೈನ್ ಅಧ್ಯಕ್ಷ ಡಾ.ಮನೋಜ್ ಅಡ್ಡಂತಡ್ಕ, ನಪಂ ಸದಸ್ಯರಾದ ಶೀಲಾವತಿ ಕುರುಂಜಿ, ಕಿಶೋರಿ ಶೇಟ್, ಪತ್ರಕರ್ತರ ಸಂಘ ಅಧ್ಯಕ್ಷ ಲೋಕೇಶ್ ಪೆರ್ಲಂಪಾಡಿ, ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷೆ ಜಯಶ್ರೀ ಕೊಯಿಂಗೋಡಿ ಉಪಸ್ಥಿತರಿದ್ದರು. ನಪಂ ಮಾಜಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಪ್ರಮುಖರಾದ ನಾರಾಯಣ ಶಾಂತಿನಗರ, ಶಿವಕುಮಾರ್ ಕೊಯಿಂಗೋಡಿ, ವರದಿಗಾರ ಗಣೇಶ್ ಕುಕ್ಕುದಡಿ, ಅರುಣ್ ಕುರುಂಜಿ, ಬಾಲಕಿಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ವಿವೇಕಾನಂದರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ಸ್ವಾಮಿ ವಿವೇಕಾನಂದ ಪ್ರತಿಮೆ ನಿರ್ಮಾಣ ಸಮಿತಿ ಅಧ್ಯಕ್ಷ ರಾಜೇಶ್ ಮೇನಾಲ ಸ್ವಾಗತಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net