

ವಿಜಯವಾಣಿ ಸುದ್ದಿಜಾಲ ಬ್ರಹ್ಮಾವರ
ತಳ ಸಮುದಾಯವನ್ನು ದೂರ ಇರಿಸಿದಷ್ಟು ಹಿಂದುತ್ವಕ್ಕೆ ಅಪಾಯ ಹೆಚ್ಚು. ಕಚ್ಚೂರು ಕ್ಷೇತ್ರ ಭಾರತಕ್ಕೆ ಮಾದರಿ ಎಂದು ವಿದ್ಯಾವಾಚಸ್ಪತಿ ಡಾ.ವಿಶ್ವಸಂತೋಷ್ ಭಾರತಿ ಶ್ರೀಪಾದರು ಹೇಳಿದರು.
ಕಚ್ಚೂರು ಶ್ರೀ ಮಾಲ್ತಿದೇವಿ ದೇವಸ್ಥಾನ, ಬಬ್ಬು ಸ್ವಾಮಿ ಮೂಲಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಜಾತಿ ವ್ಯವಸ್ಥೆ ಹಿಂದುತ್ವಕ್ಕೆ ಮಾರಕವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಂದುತ್ವಕ್ಕೆ ಮಾನ್ಯತೆ ಬಂದಿದೆ. ಮಹಾಕುಂಭ ಮೇಳದಲ್ಲಿ ಒಂದಾದ ಮೂರುವರೆ ಕೋಟಿ ಹಿಂದುಗಳಿಂದ ಹಿಂದುತ್ವದ ಶಕ್ತಿ ಪ್ರದರ್ಶನವಾಗಿದೆ ಎಂದರು.
ಶಾಸಕ ಯಶಪಾಲ್ ಎ. ಸುವರ್ಣ ಸಹಾಯಧನ ವಿತರಿಸಿದರು. ಕಚ್ಚೂರು ಕ್ಷೇತ್ರ ಆಡಳಿತ ಮಂಡಳಿ ಅಧ್ಯಕ್ಷ ಶಿವಪ್ಪ ನಂತೂರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕೆ.ರಘುಪತಿ ಭಟ್, ಬಾರಕೂರು ಗ್ರಾಪಂ ಅಧ್ಯಕ್ಷ ಶಾಂತಾರಾಮ ಶೆಟ್ಟಿ, ಪ್ರಮುಖರಾದ ಸಿ.ಎ.ಕೆ.ಪದ್ಮನಾಭ ಕಾಂಚನ್, ಸುಧಾಕರ ಶೆಟ್ಟಿ, ಪಿ.ಬಾಬು, ಹರಿಶ್ಚಂದ್ರ, ಶಿವರಾಜ್ ಮಲ್ಲಾರ್, ಪ್ರದೀಪ್ ಕಾಪಿಕಾಡ್, ಮಂಜುನಾಥ ಕರ್ಕೇರ, ಮಂಜುನಾಥ ತವರು ಮನೆ ಎಂ.ಎ, ಡಾ.ಅಪ್ಪಗೆರೆ ತಿಮ್ಮರಾಜು, ರಾಜು ಹೆಜಮಾಡಿ, ಗಣೇಶ್ ನೆರ್ಗಿ, ಜಲಜಾಕ್ಷಿ ತಮ್ಮಯ್ಯ ಕಿನ್ನಿಮೂಲ್ಕಿ, ರವೀಂದ್ರ ಸಾಲ್ಯಾನ್ ಉಪಸ್ಥಿತರಿದ್ದರು. ಗೋಕುಲ್‌ದಾಸ್ ಬಾರಕೂರು ಸ್ವಾಗತಿಸಿದರು. ಗಣೇಶ್ ಗಂಗೊಳ್ಳಿ ಪ್ರಾರ್ಥಿಸಿದರು. ಸಂತೋಷ್ ನಂಬಿಯಾರ್, ಪ್ರಸನ್ನ ಪಡುಬಿದ್ರಿ ನಿರೂಪಿಸಿದರು.
ನಿವೃತ್ತ ಮುಖ್ಯ ಶಿಕ್ಷಕ ಕರುಣಾಕರ ಮಾಸ್ತರ್ ಮಲ್ಪೆ, ಮುಳುಗುತಜ್ಞ ಈಶ್ವರ್ ಮಲ್ಪೆ ಅವರಿಗೆ ಸಮಾಜಸೇವಾ ಪುರಸ್ಕಾರ ಪ್ರದಾನಿಸಲಾಯಿತು. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಬಳಿಕ ವೈದ್ಯಕೀಯ ನೆರವು ಹಸ್ತಾಂತರಿಸಲಾಯಿತು.