

ಪಡುಬಿದ್ರಿ: ನಮ್ಮ ಹಿರಿಯರು ಭಗವಂತನನ್ನು ಪ್ರಕೃತಿಯಲ್ಲಿ, ಅಶ್ವತ್ಥ ಮರದಲ್ಲಿ, ಗೋಮಾತೆಯಲ್ಲಿ, ನಾಗನಲ್ಲಿ ಮಾತ್ರವಲ್ಲದೇ ಕಲ್ಲಿನಲ್ಲೂ ಕಂಡಿದ್ದಾರೆ. ಇದು ನಮ್ಮ ಭಾರತೀಯ ಸಂಸ್ಕೃತಿ. ಢಕ್ಕೆಬಲಿಯು ಪ್ರಕೃತ್ಯಾರಾಧನೆಗೊಂದು ವಿಶಿಷ್ಟ ಕೊಡುಗೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.
ದ್ವೈವಾರ್ಷಿಕ ನಡಾವಳಿ ಢಕ್ಕೆಬಲಿಗೆ ಪ್ರಸಿದ್ಧವಾಗಿರುವ ಪಡುಬಿದ್ರಿಯ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನಕ್ಕೆ ಶನಿವಾರ ಭೇಟಿ ನೀಡಿ ಬಳಿಕ ಶ್ರೀ ಜ್ಞಾನಮಂದಿರದಲ್ಲಿ ಮಾಲಿಕೆ ಮಂಗಳಾರತಿ ಸ್ವೀಕರಿಸಿ ಆಶೀರ್ವಚನ ನೀಡಿದರು.
ಶ್ರೀ ಬ್ರಹ್ಮಸ್ಥಾನಕ್ಕೆ ಆಗಮಿಸಿದ ಶ್ರೀಪಾದರನ್ನು ಗುರಿಕಾರ ಕೊರ್ನಾಯ ಪದ್ಮನಾಭ ರಾವ್ ಸ್ವಾಗತಿಸಿದರು. ಸೇವಾಕರ್ತ ಸತೀಶ್ಚಂದ್ರ ಆರ್.ಶೆಟ್ಟಿ ಕೆರಮಗುತ್ತು ದಂಪತಿ ಶ್ರೀಪಾದರ ಮಾಲಿಕೆ ಮಂಗಳಾರತಿ ನೆರವೇರಿಸಿದರು. ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದ ಪಾತ್ರಿಗಳಾದ ಸುರೇಶ್ ರಾವ್, ಹರಿನಾರಾಯಣ ರಾವ್, ಸುಬ್ರಹ್ಮಣ್ಯ ರಾವ್, ವನದುರ್ಗಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ವೈ. ಎನ್. ರಾಮಚಂದ್ರ ರಾವ್, ಕೋಶಾಧಿಕಾರಿ ಸುರೇಶ್ ರಾವ್ ವೈ, ಗುರಿಕಾರ ಮುರುಡಿ ಜಗದೀಶ ರಾವ್ ಟ್ರಸ್ಟಿಗಳಾದ ಶ್ರೀನಿವಾಸ ರಾವ್ ರವೀಂದ್ರನಾಥ ಪಿ.ಎಚ್. ಉಪಸ್ಥಿತರಿದ್ದರು.