90 ರೂ. ಇದ್ದ ಬಸ್​ ಟಿಕೆಟ್​ ದರ 180ಕ್ಕೆ ಏರಿಕೆ! ಪ್ರಯಾಣಿಕರೇ ಮನೆಯಿಂದ ಹೊರ ಹೋಗುವ ಮುನ್ನ ಜೇಬಲ್ಲಿ ಕಾಸಿದ್ಯಾ ನೋಡಿ

bus
Published on

ಮಂಡ್ಯ: ಸಾರಿಗೆ ನೌಕರರ ಮುಷ್ಕರ ಪ್ರಯಾಣಿಕರ ಕೈ ಸುಡುತ್ತಿದೆ. 90 ರೂಪಾಯಿ ಇದ್ದ ಬಸ್​ ಟಿಕೆಟ್​ ದರ ಇಂದು 150ರಿಂದ 180 ರೂಪಾಯಿ ಆಗಿದ್ದು, ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೌದು, ಮಂಡ್ಯದಿಂದ ಮೈಸೂರಿಗೆ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಟಿಕೆಟ್​ ದರ 90 ರೂಪಾಯಿ. ಪ್ರತಿಭಟನೆ ಹಿನ್ನೆಲೆ ಮಂಡ್ಯದಲ್ಲಿ ಸಾರಿಗೆ ಬಸ್​ಗಳು ರಸ್ತೆಗಿಳಿದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಬಸ್​ನವರು ಟಿಕೆಟ್​ ದರವನ್ನ 150 ರಿಂದ 180 ರೂಪಾಯಿಗೆ ನಿಗದಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿರಿ ಪ್ರಿಯಕರನ ಮನೆಗೆ ಬೆಂಕಿ ಇಟ್ಟ ಪ್ರೀತಿಯ ಕಿಚ್ಚು! ಪ್ರೇಯಸಿಯೊಂದಿಗೆ ಇರುವಾಗಲೇ ನಡೆಯಿತು ದುರಂತ

ಬಸ್​ ನಿಲ್ದಾಣ ಮುಂಭಾಗ ಸಾಲುಗಟ್ಟಿ ನಿಂತು ಪ್ರಯಾಣಿಕರು ವಿಧಿ ಇಲ್ಲದೆ ಖಾಸಗಿ ಬಸ್​ ಅನ್ನೇ ಹತ್ತುತ್ತಿದ್ದ ದೃಶ್ಯ ಕಂಡುಬಂತು. ಬೆಂಗಳೂರು ಮತ್ತು ಮೈಸೂರು ಕಡೆಗೆ ಖಾಸಗಿ ಬಸ್‌ಗಳ ಪ್ರಯಾಣ ಆರಂಭವಾಗಿದೆ.

ಸ್ಥಳಕ್ಕೆ ಬಂದ ಮಂಡ್ಯದ ಪಶ್ಚಿಮ ಠಾಣೆ ಸಬ್ ಇನ್​ಸ್ಪೆಕ್ಟರ್ ವೆಂಕಟೇಶ್, ಬೆಂಗಳೂರಿಗೆ ಜನರನ್ನ‌ ಹತ್ತಿಸಿಕೊಳ್ಳುವಂತಿಲ್ಲ. ಮದ್ದೂರು, ಚನ್ನಪಟ್ಟಣ ರಾಮನಗರ ಬಳಿ ಸ್ಟಾಪ್ ಕೊಡಬೇಕು. ಕೆಎಸ್​ಆರ್​ಟಿಸಿ ಬಸ್‌ಗಳ ರೀತಿಯಲ್ಲೇ ಜನರನ್ನ ಕರೆದೊಯ್ಯುಬೇಕು. ಹೆಚ್ಚು ದರ ವಸೂಲಿ ಮಾಡುವಂತಿಲ್ಲ ಎಂದು ಖಡಕ್​ ವಾರ್ನಿಂಗ್​ ಕೊಟ್ಟರು.

ಈ ವೇಳೆ ಸ್ಥಳದಲ್ಲೇ ಇದ್ದ ಪ್ರಯಾಣಿಕನೊಬ್ಬ ಬೆಂಗಳೂರಿಗೆ ಹೋಗಲು 150 ರೂಪಾಯಿ ಕೊಡಬೇಕಂತೆ. ನಾನು ಹೋಗಲ್ಲ ಸರ್​, ಅಷ್ಟೊಂದು ಹಣ ಇಲ್ಲ ಎಂದ ಕೂಡಲೇ ಗರಂ ಆದ ವೆಂಕಟೇಶ್, ಜನರಿಂದ ಹೆಚ್ಚು ಹಣ ವಸೂಲಿ ಮಾಡಿದ್ರೆ ವಾಹನ ಸೀಜ್ ಮಾಡಬೇಕಾಗುತ್ತೆ ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net