ಮರಣಸ್ವರೂಪಿ ಕೆಎಸ್​ಆರ್​ಟಿಸಿ?!: ಗಂಡ-ಹೆಂಡತಿ-ಮಗ, ಅಪ್ಪ-ಮಗ, ಅಂಗವಿಕಲೆ ಬಳಿಕ ಇಂದು ಯುವಕನೊಬ್ಬನ ಬಲಿ ಪಡೆದ ಬಸ್​..

Ashish
Published on

ವಿಜಯನಗರ: ಕೆಎಸ್​ಆರ್​ಟಿಸಿ ಬಸ್ಸನ್ನು ನೋಡಿ ವಾಹನ ಸವಾರರು ಭಯಪಟ್ಟರೂ ಅಚ್ಚರಿ ಇಲ್ಲ. ಏಕೆಂದರೆ ಕೆಎಸ್​ಆರ್​​ಟಿಸಿ ಬಸ್​ ಮೇಲಿಂದ ಮೇಲೆ ಅಪಘಾತಕ್ಕೆ ಒಳಗಾಗುತ್ತಿದ್ದು, ಸಾವು-ನೋವು ಸಂಭವಿಸುತ್ತಲೇ ಇದೆ.

ಇತ್ತೀಚೆಗಷ್ಟೇ ಒಂದು ಅಪಘಾತದಲ್ಲಿ ಗಂಡ-ಹೆಂಡತಿ-ಮಗ ಮತ್ತು ಇನ್ನೆರಡು ಪ್ರತ್ಯೇಕ ಅಪಘಾತಗಳಲ್ಲಿ ಅಪ್ಪ-ಮಗ ಹಾಗೂ ಅಂಗವಿಕಲೆಯೊಬ್ಬಳನ್ನು ಬಲಿ ತೆಗೆದುಕೊಂಡಿದ್ದ ಕೆಎಸ್​ಆರ್​ಟಿಸಿ, ಇಂದು ಯುವಕನೊಬ್ಬನನ್ನು ಬಲಿ ಪಡೆದಿದೆ.

ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ಹೊಸ ಬಸ್​ ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿದೆ. ಇಲ್ಲಿನ ಪೆಟ್ರೋಲ್ ಬಂಕ್​ವೊಂದರ ಸಮೀಪ ಕೆಎಸ್​ಆರ್​ಟಿಸಿ ಬಸ್​ ಮತ್ತು ಬೈಕ್​ ನಡುವೆ ಅಪಘಾತ ಉಂಟಾಗಿದೆ. ಪರಿಣಾಮವಾಗಿ ಬೈಕ್ ಸವಾರ ಆಶಿಶ್​ (19) ಮೃತಪಟ್ಟಿದ್ದಾನೆ. ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net