ಮತ್ತೆ ಮಾರಣಾಂತಿಕವಾದ ಕೆಎಸ್​ಆರ್​ಟಿಸಿ: ಭೀಕರ ಅಪಘಾತ, ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು...

Accident Bike
Published on

ಚಾಮರಾಜನಗರ: ಮೊನ್ನೆಮೊನ್ನೆಯಷ್ಟೇ ಅಪ್ಪ-ಮಗ ಹಾಗೂ ಅಂಗವಿಕಲೆಯೊಬ್ಬಳನ್ನು ಬಲಿ ತೆಗೆದುಕೊಂಡಿದ್ದ ಕೆಎಸ್​ಆರ್​ಟಿಸಿ, ಇಂದು ಒಂದೇ ಕುಟುಂಬದ ಮೂವರನ್ನು ಬಲಿ ಪಡೆದಿದೆ.

ತಾಲೂಕಿನ ಮರಿಯಾಲ ಬಳಿಯ ಚಾಮರಾಜನಗರ- ಮೈಸೂರು ಹೆದ್ದಾರಿಯಲ್ಲಿ‌ ಕೆಎಸ್​ಆರ್​​ಟಿಸಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕಟುಂಬದ ಮೂವರು ಸಾವಿಗೀಡಾಗಿದ್ದಾರೆ. ಮೃತಪಟ್ಟವರು ಗಂಡ-ಹೆಂಡತಿ ಮತ್ತು ಮಗ.

ಮೈಸೂರಿನಿಂದ ಚಾಮರಾಜನಗರ ಕಡೆಗೆ ಬರುತ್ತಿದ್ದ ಬಸ್ ಮರಿಯಾದ ಬಳಿ ಇರುವ ರೈಲ್ವೆ ಸೇತುವೆ ಮೇಲೆ ಬರುತ್ತಿರುವಾಗ ಚಾಮರಾಜನಗರ ಕಡೆಯಿಂದ ಮರಿಯಾಲ ಕಡೆಗೆ ತೆರಳುತ್ತಿದ್ದ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್​ನಲ್ಲಿದ್ದ ಮೂವರು ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವಿಗೀಡಾದರು.

ಮೃತರು ಚಾಮರಾಜನಗರ ಪಟ್ಟಣದ ಚನ್ನೀಪುರಮೋಳೆ ಬಡಾವಣೆಯ ಅಶೋಕ್, ಮತ್ತಿಬ್ಬರ ಗುರುತು ಪತ್ತೆಯಾಗಿಲ್ಲ‌‌. ಪೊಲೀಸರು ಗುರುತು ಪತ್ತೆಯಲ್ಲಿ ತೊಡಗಿದ್ದಾರೆ. ಘಟನಾ ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net