ಬ್ರಹ್ಮಕುಮಾರಿ ವಿವಿಯಲ್ಲಿ ಮುದ್ದು ಕೃಷ್ಣ ಸ್ಪರ್ಧೆ

bmr (2)
Published on

ಬ್ರಹ್ಮಾವರ: ಇಲ್ಲಿನ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಭಾನುವಾರ ಮುದ್ದು ಕೃಷ್ಣ ಸ್ಪರ್ಧೆ ನೂತನವಾಗಿ ನಿರ್ಮಾಣಗೊಂಡ ಬ್ರಹ್ಮಕುಮಾರೀಸ್ ಬಳಿ ಜರುಗಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ಪ್ರವೀಣ ಉದ್ಘಾಟಿಸಿದರು. 1ರಿಂದ 10 ವರ್ಷದ ಮಕ್ಕಳಲ್ಲಿ 4 ವಿಭಾಗದಲ್ಲಿ ಸ್ಪರ್ಧೆ ಜರುಗಿತು.

ಕೊಳ್ಕೆಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿಯರಾದ ಪೂರ್ಣಿಮಾ ಕೆ.ಶೆಟ್ಟಿ, ಶಾಂತಾ ಪೈ, ಶೀತಲ್‌ನಯನ, ಜಯಶ್ರೀ ಶೆಟ್ಟಿ ತೀರ್ಪುಗಾರರಾಗಿದ್ದರು. ಬಿಕೆ ಮಂಜುಳ, ಬಿಕೆ ಸಂದೇಶ ಕಾರ್ಯಕ್ರಮ ವ್ಯವಸ್ಥೆಗೊಳಿಸಿದ್ದರು. 50ಕ್ಕಿಂತ ಹೆಚ್ಚು ಮುದ್ದು ಮಕ್ಕಳು ಕೃಷ್ಣನಾಗಿ ಬಾಲ ಲೀಲೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net