ಪುಣ್ಯ ಕ್ಷೇತ್ರ ಧರ್ಮಸ್ಥಳದ ಹೆಸರಿಗೆ ಕಳಂಕ ತರಬೇಡಿ

hbr (3)
Published on

ಹೆಬ್ರಿ: ಶ್ರೀ ಕ್ಷೇತ್ರ ಶ್ರೀ ಧರ್ಮಸ್ಥಳದ ಹೆಸರು ಕೆಡಿಸುವ ಕೆಲವೊಂದು ಪಟ್ಟಾಭದ್ರ ಹಿತಾಸಕ್ತಿಗಳ ಗುಂಪು ಸುಳ್ಳು ಷಡ್ಯಂತ್ರ ಹೂಡಿ ಕ್ಷೇತ್ರ, ಮಂಜುನಾಥ ಸ್ವಾಮಿ ಹಾಗೂ ಧರ್ವಾಧಿಕಾರಿ ವೀರೇಂದ್ರ ಹೆಗ್ಗಡೆ ಹೆಸರಿಗೆ ಕಳಂಕ ತರುತ್ತಿರುವುದು ವಿಷಾದನೀಯ ಶ್ರೀ ಕ್ಷೇತ್ರ ಧರ್ಮಸ್ಥಳ ಜನಜಾಗೃತಿ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಹೇಳಿದ್ದಾರೆ. ಪುಣ್ಯ ಕ್ಷೇತ್ರ ಧರ್ಮಸ್ಥಳವನ್ನು ನಮ್ಮ ನಾಡಿನ ಹಿರಿಯರು, ನಮ್ಮ ಮನೆದೇವರು, ಗ್ರಾಮದೇವರಾಗಿ ಆರಾಧಿಸುವ ಕ್ಷೇತ್ರದ ಪಾವಿತ್ರತೆಯನ್ನು ಉಳಿಸಿಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಶ್ರೀಕ್ಷೇತ್ರ, ವೀರೇಂದ್ರ ಹೆಗ್ಗಡೆಯವರ ಬಗ್ಗೆ ಕಿಡಿಗೇಡಿಗಳು ವಾಡುವ ಆಧಾರ ರಹಿತ ಆರೋಪಗಳಿಗೆ ಕಿವಿಗೊಡದೆ ಧಾರ್ಮಿಕ ನಂಬಿಕೆಯಲ್ಲಿ ಬದುಕುವ ಉಭಯ ಜಿಲ್ಲೆಯ ಪ್ರಜ್ಞಾವಂತರು ಎಚ್ಚರ ವಹಿಸಿ ಕ್ಷೇತ್ರದ ಬಗ್ಗೆ ನಡೆಯುವ ಅಪಪ್ರಚಾರವನ್ನು ಖಂಡಿಸುವಂತೆ ನೀರೆ ಕೃಷ್ಣ ಶೆಟ್ಟಿ ಮನವಿ ವಾಡಿದ್ದಾರೆ.

20ಕ್ಕೆ ಕಾಲ್ನಾನಡಿಗೆ ಜಾಥಾ

ಕ್ಷೇತ್ರದ ಬಗ್ಗೆ ವ್ಯವಸ್ಥಿತ ಅಪಪ್ರಚಾರ ವಿರುದ್ಧ ಹೆಬ್ರಿ ತಾಲೂಕು ಜನಜಾಗೃತಿ ವೇದಿಕೆ ಮತ್ತು ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆಯ ಒಕ್ಕೂಟಗಳ ಸದಸ್ಯರು 20ಕ್ಕೆ ಹೆಬ್ರಿ ತಾಣ ಶ್ರೀ ಅರ್ಧನಾರೀಶ್ವರ ದೇವಸ್ಥಾನದಿಂದ ಕಾಲ್ನಾಡಿಗೆ ಮೂಲಕ ತಾಲೂಕು ಕಚೇರಿಗೆ ತೆರಳಿ ಸರ್ಕಾರಕ್ಕೆ ಮನವಿ ನೀಡಲಿದ್ದಾರೆ ಎಂದು ನೀರೆ ಕೃಷ್ಣ ಶೆಟ್ಟಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net