ಮಾರುತಿ ದೇಗುಲದಲ್ಲಿ ಭಜನಾ ಸಪ್ತಾಹ ಸಂಪನ್ನ

kota (5)
Published on

ಕೋಟ: ಇಲ್ಲಿನ ಕೋಟದ ಶ್ರೀ ಕಾಶೀಮಠ ಶ್ರೀ ಮುರುಳೀಧರಕೃಷ್ಣ ಮಾರುತಿ ದೇಗುಲದಲ್ಲಿ ಅಷ್ಟಮಿ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ನಡುವೆ ಭಜನಾ ಸಪ್ತಾಹ ಭಾನುವಾರ ಸಂಪನ್ನಗೊಂಡಿತು.

ಕೋಟದ ಜಿಎಸ್‌ಬಿ ಸಮಾಜದವರು ದೇಗುಲದಲ್ಲಿ ಧಾರ್ಮಿಕ ವಿಧಿ-ವಿಧಾನ ಪೂರೈಸಿದರು. ಕೋಟದ ರಾಷ್ಟ್ರೀಯ ಹೆದ್ದಾರಿ ಮೂಲಕ ಬಣ್ಣ ಬಣ್ಣದ ರಂಗಿನ ಓಕುಳಿಯಾಟ ಗಮನ ಸೆಳೆಯಿತು.

ಕೋಟದ ಕಾಶೀಮಠ ದೇವದತ್ತ ಭಟ್, ಕಪಿಲದಾಸ್ ಭಟ್, ಸಮುದಾಯದ ಪ್ರಮುಖರಾದ ರಮೇಶ್ ಪಡಿಯಾರ್, ನರಸಿಂಹ ಪ್ರಭು, ಸತೀಶ್ ಹೆಗ್ಡೆ ಸೇರಿದಂತೆ ಸಮುದಾಯದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net