ನಾಳೆ ನಡೆಯಬೇಕಿದ್ದ ಕೆ-ಸೆಟ್ ಎಕ್ಸಾಂ ಮುಂದೂಡಿಕೆ

exam new
Published on

ಬೆಂಗಳೂರು: ನಾಳೆ(ಏ.11) ನಡೆಯಬೇಕಿದ್ದ ಕೆ-ಸೆಟ್ ಎಕ್ಸಾಂ ​(ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆ) ಮುಂದೂಡಲ್ಪಟ್ಟಿದೆ.

ಮೈಸೂರು ವಿಶ್ವವಿದ್ಯಾನಿಲಯ ಇದೇ ಭಾನುವಾರ 2021ನೇ ಸಾಲಿನ ಕೆ-ಸೆಟ್ ಪರೀಕ್ಷೆ ನಡೆಸಲು ಪೂರ್ವಸಿದ್ಧತೆ ಮಾಡಿಕೊಂಡಿತ್ತು. ಆದರೆ ಕಾರಣಾಂತರಗಳಿಂದ ಕೆ-ಸೆಟ್​ ಪರೀಕ್ಷೆಯನ್ನ ಮೂದೂಡಿ ಆದೇಶ ಹೊರಡಿಸಿದೆ.

ಪರೀಕ್ಷೆ ನಡೆಯುವ ಮರು ದಿನಾಂಕವನ್ನ ಶೀಘ್ರದಲ್ಲೇ ಕೆ-ಸೆಟ್​ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗುವುದು. ನೋಂದಾಯಿತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಕೆ-ಸೆಟ್​ ವೆಬ್​ಸೈಟ್​ http://kset.uni-mysore.ac.in/ ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net