ಕೆಪಿಇಎಂ ಕಾಯ್ದೆ ವಾಪಸ್ ಪಡೆಯಿರಿ

4-DVD-2
ಕೆಪಿಇಎಂ ಕಾಯ್ದೆ ವಾಪಸ್ ಪಡೆಯುವಂತೆ ಒತ್ತಾಯಿಸಿ ದೇವದುರ್ಗದಲ್ಲಿ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿಗೆ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಮನವಿ ಸಲ್ಲಿಸಿತು. ಜಿಲ್ಲಾಧ್ಯಕ್ಷಮಲ್ಲಪ್ಪ ಗೌಡೂರು, ಮುಖಂಡರಾದ ಗಂಗಪ್ಪ ಜೋಳದಹೆಡಗಿ, ಲಿಯಾಕತ್ ಅಲಿ, ಅಮರೇಶ ಯರಮರಸ್, ದುರುಗಪ್ಪ ಸಮುದ್ರ, ಹೊನ್ನಪ್ಪ ಇತರರಿದ್ದರು.
Published on

ದೇವದುರ್ಗ: ಆಯುಷ್ ಹಾಗೂ ಪಾರಂಪರಿಕ ವೈದ್ಯರಿಗೆ ಮಾರಕವಾಗುವ ಕೆಪಿಇಎಂ ಕಾಯ್ದೆ ವಾಪಸ್ ಪಡೆಯುವಂತೆ ಒತ್ತಾಯಿಸಿ ಪಟ್ಟಣದ ತಹಸಿಲ್ ಕಚೇರಿಯಲ್ಲಿ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿಗೆ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಸೋಮವಾರ ಮನವಿ ಸಲ್ಲಿಸಿತು.

ಆಯುಷ್ ಹಾಗೂ ಪಾರಂಪರಿಕ ವೈದ್ಯರು ಗ್ರಾಮೀಣ ಭಾಗ, ನಗರ ಪ್ರದೇಶಗಳಲ್ಲಿ ಅನೇಕ ಶತಮಾನಗಳಿಂದ ಅತಿಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಹಾಗೂ ಔಷಧ ನೀಡಿ ಉತ್ತಮ ಆರೋಗ್ಯ ಸೇವೆ ಒದಗಿಸುತ್ತಿದ್ದಾರೆ. ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಮೆಡಿಕಲ್ ಮಾಫಿಯಾ ಒತ್ತಡದ ಮೇಲೆ ಸರ್ಕಾರ ಕೆಪಿಇಎಂ ಕಾಯ್ದೆ ಜಾರಿಗೆ ತರುವ ಮೂಲಕ ಪಾರಂಪರಿಕ ವೈದ್ಯಕೀಯ ಪದ್ಧತಿ ಮೇಲೆ ಗಧಾಪ್ರಹಾರ ಮಾಡುತ್ತಿದೆ.

ಸರ್ಕಾರದ ಪ್ರಾಥಮಿಕ, ಸಮುದಾಯ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಹಾಗೂ ಔಷಧ ಕೊರತೆ ಕಾಡುತ್ತಿದೆ. ಖಾಸಗಿ ಆಸ್ಪತ್ರೆ, ಕ್ಲೀನಿಕ್‌ಗಳಲ್ಲಿ ರೋಗಗಳಿಂದ ವಿಪರೀತ ಹಣ ವಸೂಲಿ ಮಾಡಲಾಗುತ್ತಿದೆ. ಇಂಥ ಸಂದರ್ಭದಲ್ಲಿ ಆಯುಷ್ ಹಾಗೂ ಪಾರಂಪರಿಕ ವೈದ್ಯರ ವಿರುದ್ಧ ಕ್ರಮಕ್ಕೆ ಮುಂದಾಗಿರುವುದು ಬಡವರ ಹೊಟ್ಟೆ ಮೇಲೆ ಬರೆ ಎಳೆದಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಕೆಪಿಇಎಂ ಕಾಯ್ದೆ ವಾಪಸ್ ಪಡೆಯಬೇಕು. ಆಯುಷ್ ಹಾಗೂ ಪಾರಂಪರಿಕ ವೈದ್ಯರಿಗೆ ಯಾವುದೇ ಸಮಸ್ಯೆಯಾಗದಂತೆ ಚಿಕಿತ್ಸೆ ನೀಡಲು ಅವಕಾಶ ನೀಡಬೇಕು. ನಿರ್ಲಕ್ಷ್ಯ ಮಾಡಿದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾಧ್ಯಕ್ಷ ಮಲ್ಲಪ್ಪ ಗೌಡೂರು, ಮುಖಂಡರಾದ ಗಂಗಪ್ಪ ಜೋಳದಹೆಡಗಿ, ಲಿಯಾಕತ್ ಅಲಿ, ಅಮರೇಶ ಯರಮರಸ್, ದುರುಗಪ್ಪ ಸಮುದ್ರ, ಹೊನ್ನಪ್ಪ ಗುಂಡಗುರ್ತಿ, ಬಸವರಾಜ ಬಾವಿಮನಿ, ಭೀಮಣ್ಣ ಗಣೇಕಲ್, ಯೇಸು ಮಸರಕಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net