

ಯಾದಗಿರಿ: ಆದಾಯ ತೆರಿಗೆಯಂತಹ ಮಹತ್ವದ ಕಾಯ್ದೆ ಜಾರಿ ತರುವ ಪೂರ್ವ ಈ ಬಗ್ಗೆ ನುರಿತ ತಜ್ಞರ ಮತ್ತು ಈ ಕ್ಷೇತ್ರದಲ್ಲಿ ಅನುಭವಿಗಳ ಮಧ್ಯೆ ಚರ್ಚೆಗೆ ಕೇಂದ್ರ ಸರ್ಕಾರ ಅವಕಾಶ ನೀಡುವ ಅಗತ್ಯವಿತ್ತು ಎಂದು ರಾಯಚೂರು ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದ ಜಿ.ಕುಮಾರ ನಾಯಕ್ ಹೇಳಿದರು.
ನಗರದ ಎಸ್ಡಿಎನ್ ಹೋಟೆಲïನಲ್ಲಿ ಜಿ¯್ಲÁ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಮತ್ತು ಚಾರ್ಟೆಡ್ ಅಕೌಂಟ್ ಅಸೋಸಿಯೇಷನ್ ಜಂಟಿಯಾಗಿ ಆಯೋಜಿಸಿದ್ದ ನೂತನ ಆದಾಯ ತೆರಿಗೆ ಕಾಯ್ದೆ-೨೦೨೫ರ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ತೆರಿಗೆ ಕಾಯ್ದೆ ಚಾರ್ಟೆಡ್ ಅಕೌಂಟೆAಟ್ ಸೇವೆಗೆ ಮಾರಕವಾಗಿದೆ ಎಂದರು.
ಕೇAದ್ರ ಸರ್ಕಾರ ಪ್ರಸ್ತುತ ಅಸ್ತಿತ್ವದಲ್ಲಿರುವ ಆದಾಯ ತೆರಿಗೆ ಕಾಯ್ದೆಗೆ, ತಿದ್ದುಪಡಿಯ ನೂತನ ಆದಾಯ ತೆರಿಗೆ ಕಾಯ್ದೆ-೨೦೨೫ ಜಾರಿ ಸಿದ್ಧತೆ ನಡೆಸಿದೆ. ಡಿಜಿಟಲï ಡಿವೈಸ್ ತಂತ್ರe್ಞÁನ ವ್ಯಾಪಾರಿಗಳ ಖಾಸಗಿ ಜೀವನಕ್ಕೆ ಸಂಚಕಾರವಾಗಿದೆ. ಇಂತಹ ಮಹತ್ವದ ಕಾಯ್ದೆ ಜಾರಿ ಪೂರ್ವ ಇದರ ಎಲ್ಲ ಅಂಶಗಳ ಬಗ್ಗೆ ನೂತನ ಆದಾಯ ತೆರಿಗೆ ಕಾಯ್ದೆ ಜಾರಿಗೆ ಪೂರ್ವ ಚರ್ಚೆ ಬಹಳ ಅಗತ್ಯವಿತ್ತು. ಈ ಹಿಂದೆ ವಿರೋಧ ಪP್ಷÀಗಳ ಒತ್ತಾಯದಿಂದ ವಕ್ಫ್ ತಿದ್ದುಪಡೆ ಕಾಯ್ದೆ ಚರ್ಚೆಗೆ ಅವಕಾಶ ಮಾಡಿಕೊಡಲಾಗಿತ್ತು ಎಂದು ಹೇಳಿದರು.
ಹಿರಿಯ ಚಾರ್ಟೆಡ್ ಅಕೌಂಟೆAಟ್ಗಳಾದ ವೆಂಕಟ ಕೃಷ್ಣ, ವಿವೇಕ್ ಎಂ. ಮಾತನಾಡಿ, ಡಿಜಿಟಲï ತಂತ್ರe್ಞÁನ ವೈಯಕ್ತಿಕ ಜೀವನಕ್ಕೆ ಬಾಧಕವಾಗದಂತೆ ಗಮನಿಸಬೇಕು. ಚಾರ್ಟೆಡ್ ಅಕೌಂಟೆAಟ್ ವೃತ್ತಿ ಜೀವನದ ಮೇಲೆ ಯಾವುದೇ ಪ್ರಹಾರ ಮಾಡದಂತೆ ತಿದ್ದುಪಡಿ ಪರಿಷ್ಕರಿಸಬೇಕು ಎಂದು ಧ್ವನಿ ಎತ್ತಿದರು.
ಕೇಂದ್ರ ಸರ್ಕಾರದ ಮುಂದೆ ಮಂಡಿಸುವ ೫ ಪ್ರಶ್ನೆಗಳ ಬಗ್ಗೆ ಈ ಸಭೆಯಲ್ಲಿ ಸುದೀರ್ಘ ಚರ್ಚೆ ಮತ್ತು ಅದಕ್ಕೆ ಪೂರಕ ಮಾಹಿತಿ ಒದಗಿಸಲಾಯಿತು. ಜಿ¯್ಲÁ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ದಿನೇಶ್ ಜೈನ ಸ್ವಾಗತಿಸಿದರು. ಕಾರ್ಯದರ್ಶಿ ಮಲ್ಲಿಕಾರ್ಜುನ ಅಕ್ಕಿ ಜಿಲ್ಲೆಗೆ ಬೇಕಾದ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿದರು.
ಹಿರಿಯ ವ್ಯಾಪಾರಿಗಳಾದ ಮಲ್ಲಿಕಾರ್ಜುನ ಪಾಟೀಲ್ ಕೌಳೂರು, ಮಲ್ಲಿಕಾರ್ಜುನ ಶಿರಗೋಳ್ ಸೇರಿದಂತೆಯೇ ಸಂಘದ ಪದಾಧಿಕಾರಿಗಳು, ಸದಸ್ಯರು, ವ್ಯಾಪಾರಸ್ಥರು, ಚಾರ್ಟೆಡ್ ಅಕೌಂಟೆAಟ್ಗಳು ಸೇರಿ ಇತರರು ಭಾಗವಹಿಸಿದ್ದರು.