6ರಿಂದ ಪಡುಕುತ್ಯಾರು ಮಠದಲ್ಲಿ ಕೋಟಿ ಕುಂಕುಮಾರ್ಚನೆ

kumkum
Published on

ಪಡುಬಿದ್ರಿ: ಶ್ರೀ ಸರಸ್ವತೀ ಮಾತೃಮಂಡಳಿ, ಆನೆಗುಂದಿ ಪ್ರತಿಷ್ಠಾನ ವ್ಯಾಪ್ತಿಯ ದೇವಸ್ಥಾನಗಳು ಹಾಗೂ ಸ್ಥಳೀಯ ಪಂಚಾಯಿತಿ ಹಿಂದು ಸಮಾಜ ಬಾಂಧವರ ಸಹಭಾಗಿತ್ವದಲ್ಲಿ ಜ.6ರಿಂದ 12ರವರೆಗೆ ಕೋಟಿ ಕುಂಕುಮಾರ್ಚನೆ ಪಡುಕುತ್ಯಾರಿನಲ್ಲಿರುವ ಕಟಪಾಡಿ ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದಲ್ಲಿ ನಡೆಯಲಿದೆ.

ಮಹಾಸಂಸ್ಥಾನದ ವಿವಿಧ ಯೋಜನೆಗಳ ಸಾಕಾರ ಮತ್ತು ಲೋಕ ಕಲ್ಯಾಣದ ಸಂಕಲ್ಪದೊಂದಿಗೆ ಕೇಪಳ ಪುಷ್ಪದೊಂದಿಗೆ ಶ್ರೀ ಸರಸ್ವತೀ ಯಾಗ ಶಾಲೆಯಲ್ಲಿ ನಡೆಯುವ ಕೋಟಿ ಕುಂಕುಮಾರ್ಚನೆ ವೇಳೆ ವಿವಿಧ ಹೋಮ ಯಜ್ಞ ಆಯೋಜಿಸಲಾಗಿದೆ.

6ರಂದು ಅಷ್ಟಚಾತ್ವಾರಿಂಶತ್ ನಾರಿಕೇಳ ಗಣಪತಿ ಯಾಗ, ಶ್ರೀಗುರುಭಕ್ತಿ ಕುಸುಮಾಂಜಲಿ ಸ್ತೋತ್ರ ಪುಸ್ತಕ ಬಿಡುಗಡೆ, ಮಹಾಸಂಸ್ಥಾನದ ಯುಟ್ಯೂಬ್ ಚಾನೆಲ್ ಆರಂಭ, 7ರಂದು ರುದ್ರಯಾಗ ಮಹಾಮೃತ್ಯುಂಜಯ ಯಾಗ, 8ರಂದು ವಿಷ್ಣು ಹವನ, ಧನ್ವಂತರಿ ಹೋಮ, 9ರಂದು ಆದಿತ್ಯ ಹೃದಯ ಹೋಮ, ಸೌರ ಸೂಕ್ತ ಹೋಮ, 10ರಂದು ಶ್ರೀ ಸರಸ್ವತೀ ಹೋಮ, ಶ್ರೀ ದುರ್ಗಾ ಹೋಮ, 11ರಂದು ವಿಶ್ವಕರ್ಮ ಹೋಮ, ನವಗ್ರಹ ಹೋಮ, 12ರಂದು ದಶ ಸಹಸ್ರ ಕದಳಿ ಶ್ರೀ ಲಲಿತಾ ಸಹಸ್ರನಾಮ ಹೋಮ, ಶ್ರೀ ಸೂಕ್ತ ಹೋಮ ಬಳಿಕ ಅರ್ಚನಾ ಸೇವೆ ನಡೆದು ಕೋಟಿ ಕುಂಕುಮಾರ್ಚನೆ ಸಮರ್ಪಣೆ ನಂತರ ಧಾರ್ಮಿಕ ಸಭೆ ಸಂಪನ್ನಗೊಳ್ಳಲಿದೆ.

ದಿನಂಪ್ರತಿ ಬೆಳಗ್ಗೆ 6ಗಂಟೆಗೆ ಪ್ರಾರ್ಥನೆ, ಗುರು ಗಣಪತಿ ಪೂಜೆ, ಪುಣ್ಯಾಹ ವಾಚನ, 6.30ಕ್ಕೆ ಯಜ್ಞಗಳ ಪ್ರಾರಂಭ, 8.30ಕ್ಕೆ ಯಜ್ಞಗಳ ಪೂರ್ಣಾಹುತಿ, 9ರಿಂದ ಅರ್ಚನೆ ಪ್ರಾರಂಭ, ಮಧ್ಯಾಹ್ನ 12.15ಕ್ಕೆ ಮಹಾಪೂಜೆ, ತೀರ್ಥ ಪ್ರಸಾದ, 1ರಿಂದ ಭೋಜನ, ವಿವಿಧ ತಂಡಗಳಿಂದ ಭಜನಾ ಸಂಕೀರ್ತನಾ ಸೇವೆ, ಮಧ್ಯಾಹ್ನ 2.30ರಿಂದ 5ಗಂಟೆಗೆ ಅರ್ಚನೆ ಮುಂದುವರಿಕೆ, ಸಂಜೆ 5.15ರಿಂದ ಮಹಾಪೂಜೆ, ಅಷ್ಟಾವಧಾನ, ತೀರ್ಥ ಪ್ರಸಾದ ವಿತರಣೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net