

ಕೋಟ: ಹಂದಟ್ಟು ಕೋಟತಟ್ಟು ಗ್ರಾಮದ ಹಂದೆ ಶ್ರೀ ಮಹಾವಿಷ್ಣು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಮೇ.10ರ ಅಕ್ಷಯ ತೃತೀಯಾದಂದು ರಥೋತ್ಸವ ನಡೆಯಲಿದೆ.
ಮೇ.5ರಿಂದ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. 9ರಂದು ಸಂಜೆ 5ರಿಂದ ಸಭಾ ಕಾರ್ಯಕ್ರಮ, ಸ್ಥಳೀಯ ಸಾಧಕರಿಗೆ ಸನ್ಮಾನ ಮತ್ತು ಅಭಿನಂದನಾ ಕಾರ್ಯಕ್ರಮ, 7.30ರಿಂದ ಬೆಂಗಳೂರು ಯಕ್ಷದೇಗುಲ ತಂಡ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ಸುದರ್ಶನ ಗರ್ವಭಂಗ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಈ ಸಂದರ್ಭ ಆರು ಮಂದಿ ಯಕ್ಷಗಾನ ಹಾಸ್ಯ ಕಲಾವಿದರಿಗೆ ನಿವೃತ್ತ ಶಿಕ್ಷಕ ಎಚ್.ಸೂರ್ಯನಾರಾಯಣ ಹಂದೆ ವಿಶೇಷ ಪುರಸ್ಕಾರ ನೀಡಲಿದ್ದಾರೆ. 10ರಂದು ಸಂಜೆ 7ರಿಂದ ಮೆಕ್ಕೆಕಟ್ಟು ಮೇಳದಿಂದ ‘ಗದಾಯುದ್ಧ ಮತ್ತು ಚಂದ್ರಾವಳಿ ವಿಲಾಸ’ ಯಕ್ಷಗಾನ ನಡೆಯಲಿದೆ. 11ರಂದು ಸಂಜೆ 6ರಿಂದ ಸ್ಥಳೀಯ ಪ್ರತಿಭೆಗಳಿಂದ ನೃತ್ಯಾಂಜಲಿ, 7ರಿಂದ ಅರೆಹೊಳೆ ಪ್ರತಿಷ್ಠಾನ ನಂದಗೋಕುಲ ತಂಡದಿಂದ ನೃತ್ಯ ವೈಭವ. ರಾತ್ರಿ 9.30ರಿಂದ ಉಪ್ಲಾಡಿ ತ್ರಿನೇತ್ರ ಕಲಾತಂಡದಿಂದ ‘ಗಗ್ಗರ ದೈವದನಿ’ ನಗೆನಾಟಕ ಪ್ರದರ್ಶನಗೊಳ್ಳಲಿದೆ.
9ರಂದು ಸಂಜೆ 4ರಿಂದ ಶ್ರೀ ಮಹಾಗಣಪತಿ ಮಹಿಳಾ ಭಜನಾ ಮಂಡಳಿ ಕಾರ್ಕಡ, 10ರಂದು ಬೆಳಗ್ಗೆ 10ರಿಂದ ಕೋಟ ಪಂಚವರ್ಣ ಮಹಿಳಾ ಮಂಡಲ, ಸಂಜೆ 4ರಿಂದ ಶ್ರೀರಾಮ ಮಹಿಳಾ ಭಜನಾ ಮಂಡಳಿ ಮಣೂರು, 11ರಂದು ಸಂಜೆ 4ರಿಂದ ಶ್ರೀರಾಮ ಭಜನಾ ಮಂಡಳಿ ಸಾಲಿಗ್ರಾಮದಿಂದ ಭಜನೆ ನಡೆಯಲಿದೆ. 10ರಂದು ಬೆಳಗ್ಗೆ 10.30ರಿಂದ ಹಂದೆ ದೇವಸ್ಥಾನ ಕೋಟ ಶ್ರೀ ಮಹಾಗಣಪತಿ ಮಹಿಳಾ ವೇದಿಕೆಯಿಂದ ಲಲಿತಾ ಸಹಸ್ರನಾಮ ಮತ್ತು ವಿಷ್ಣು ಸಹಸ್ರನಾಮ ಪಠಣ ನಡೆಯಲಿದೆ. 11ರಂದು ರಾತ್ರಿ ತೆಪ್ಪೋತ್ಸವ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಮರ್ ಹಂದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.