More

    ಕಿರಿಮಂಜೇಶ್ವರ ಗುಂಜಾನುಗುಡ್ಡೆ ಶ್ರೀ ಬೊಬ್ಬರ್ಯ ಪರಿವಾರ ದೇವರ ಪುನಃಪ್ರತಿಷ್ಠಾಪನೆ

    ವಿಜಯವಾಣಿ ಸುದ್ದಿಜಾಲ ಬೈಂದೂರು

    ಒಳ್ಳೆಯ ಮನಸ್ಸು ಮತ್ತು ಪರಿಶ್ರಮ ನಮ್ಮ ಜತೆ ಇದ್ದರೆ ಎಂತಹ ಸಂದರ್ಭವನ್ನೂ ಎದುರಿಸಬಹುದು ಎಂಬುದಕ್ಕೆ ಬೊಬ್ಬರ್ಯ ದೇವಸ್ಥಾನದ ನಿರ್ಮಾಣವೆ ಸಾಕ್ಷಿ. ಶ್ರೀ ಬೊಬ್ಬರ್ಯ ದೇವರ ದೇವಸ್ಥಾನವನ್ನು 40 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು, ನಾಲ್ಕು ದಶಕ ಬಳಿಕ ನೂತನ ಶಿಲಾಮಯ ದೇಗುಲ ನಿರ್ಮಿಸಲಾಗಿದೆ ಎಂದು ಕೊಲ್ಲೂರು ದೇವಳ ಮಾಜಿ ಧರ್ಮದರ್ಶಿ ಮಂಜುನಾಥ ಭಟ್ ಉಪ್ರಳ್ಳಿ ಹೇಳಿದರು.

    ತಾಲೂಕಿನ ಕಿರಿಮಂಜೇಶ್ವರ ಗುಂಜಾನುಗುಡ್ಡೆ ಶ್ರೀ ಬೊಬ್ಬರ್ಯ ಪರಿವಾರ ದೇವರ ಪುನಃಪ್ರತಿಷ್ಠಾಪನೆ, ನೂತನ ಶಿಲಾಮಯ ದೇಗುಲ ಲೋಕಾರ್ಪಣೆ ಹಾಗೂ ಬ್ರಹ್ಮಕಲಶೋತ್ಸವ ಪ್ರಯುಕ್ತ ಸೋಮವಾರ ನಡೆದ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು.

    ಸಾಂದೀಪನಿ ಸಾಧನಾಶ್ರಮ ಶ್ರೀ ಕ್ಷೇತ್ರ ಕೇಮಾರು ಮಠಾಧೀಶ ಈಶವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಿ, ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗದೆ ಭಾರತೀಯ ಸಂಸ್ಕೃತಿ ಅಳವಡಿಸಿ ಬದುಕುವುದರಿಂದ ಸಂಸ್ಕಾರಯುತ ಬದುಕನ್ನು ಕಂಡುಕೊಳ್ಳಬಹುದು. ಮಾತೃಭಾಷಾ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.

    ಧಾರ್ಮಿಕ ಮುಖಂಡ ಬಸ್ರೂರು ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಬೊಬ್ಬರ್ಯ ದೈವಸ್ಥಾನದ ಸ್ಥಳದಾನಿಗಳಾದ ವಸಂತ ಬಡಾಲ ಮತ್ತು ಮೋಹನ್ ಡಿ.ರಾವ್ ತ್ರಾಸಿ ಮತ್ತು ದಾನಿಗಳನ್ನು ಸನ್ಮಾನಿಸಲಾಯಿತು. ನಾರಾಯಣ ಹೆಬ್ಬಾರ್, ದೇವಸ್ಥಾನದ ಸದಸ್ಯ ರಾಜು ಎನ್.ದೇವಾಡಿಗ, ಪ್ರಕಾಶ ಐತಾಳ್, ಪ್ರಕಾಶ್ಚಂದ್ರ ಶೆಟ್ಟಿ, ವಾಸುದೇವ ಕಾರಂತ, ಶ್ರೀಧರ ಹೆಬ್ಬಾರ್, ನರಸಿಂಹ ಹಳಗೇರಿ, ನಾಗೇಶ್ ಜೋಗಿ ಇದ್ದರು. ರಾಜು ಎನ್.ದೇವಾಡಿಗ ಪ್ರಸ್ತಾವನೆಗೈದರು. ಈಶ್ವರ ದೇವಾಡಿಗ ಚಿತ್ರಾಡಿ ಕಾರ್ಯಕ್ರಮ ನಿರೂಪಿಸಿದರು.

    ಬೆಳಗ್ಗೆ ಜೋತಿಷಿ ನೀಲಾವರ ರಘುರಾಮ ಮಧ್ಯಸ್ಥರ ಮಾರ್ಗದರ್ಶನದಲ್ಲಿ ಬಿಂಬ ಪ್ರತಿಷ್ಠಾಪನೆ, ಕುಂಭಾಭಿಷೇಕ, ಅಷ್ಟೋತ್ತರ ಕಲಶ ಸ್ಥಾಪನೆ, ಬ್ರಹ್ಮಕಲಶ ಸ್ಥಾಪನೆ, ಮಹಾಪೂಜೆ, ಪರಿಕಲಶ ಸಹಿತ ಬ್ರಹ್ಮಕಲಾಶಾಭಿಷೇಕ ನೆರವೇರಿಸಲಾಯಿತು. ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts