VIDEO| ಕರೊನಾ ಲಾಕ್​ಡೌನ್​ ಬಿಕ್ಕಟ್ಟಿನ ಸಮಯದಲ್ಲೂ ಗಂಗಾವತಿ ಪೊಲೀಸರ ಲಂಚ ದಾಹ ಬಟಾಬಯಲು

Kashinatha
Published on

ಕೊಪ್ಪಳ: ಕರೊನಾ ಲಾಕ್​ಡೌನ್​ನಂತಹ ಸಂಕಷ್ಟದ ನಡುವೆಯೂ ಗಂಗಾವತಿ ಪೊಲೀಸರು ಹಗಲು ದರೋಡೆ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಾರ್ವಜನಿಕರ ವಾಹನ ತಡೆದು ಖಾಕಿ ಪಡೆ ಹಣ ಪೀಕುತ್ತಿರುವುದು ಬಟಾಬಯಲಾಗಿದೆ.

ಗಂಗಾವತಿ ಗ್ರಾಮೀಣ ಎಎಸ್ಐ ಕಾಶಿನಾಥರಿಂದ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕಿರುವ ಆರೋಪ ಕೇಳಿಬಂದಿದೆ. ಆಸ್ಪತ್ರೆಗೆ ಊಟ ಕೊಡಲು ಬಂದವರಿಂದಲು ಕಾಶಿನಾಥ್ ಹಣ ಕಿತ್ತಿದ್ದಾರೆ ಎನ್ನಲಾಗಿದೆ.

ಹೈವೇ ಪಟ್ರೋಲ್ ವಾಹನದಲ್ಲಿ ಕರ್ತವ್ಯ ಮಾಡುತ್ತಿರುವ ಎಎಸ್ಐ ಕಾಶಿನಾಥ ಒಂದು ಲಾರಿಗೆ 400 ರೂ. ಹಾಗೂ ಬೈಕ್​ಗೆ 200 ರೂಪಾಯಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕೊಪ್ಪಳ ಮತ್ತು ಕಾರಟಗಿ ರಾಜ್ಯ ಹೆದ್ದಾರಿ ಹೈವೆಯಲ್ಲಿ ಹಗಲು ದರೋಡೆ ನಡೆದಿದ್ದು, ಕಾಶಿನಾಥನ ಕರ್ಮಕಾಂಡ ಗೊತ್ತಿದ್ದರು ಹಿರಿಯ ಅಧಿಕಾರಿಗಳು ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದಾರೆ. ಪೊಲೀಸರ ಸುಲಿಗೆಯಿಂದ ಸಾರ್ವಜನಿಕರು ಹೈರಾಣಾಗಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net