ಮದುವೆಯಾದ ಒಂದೇ ವರ್ಷದಲ್ಲಿ ಪೇದೆಯ ಪತ್ನಿ ಆತ್ಮಹತ್ಯೆಗೆ ಶರಣಾಗುವಂತದ್ದು ಏನಾಗಿತ್ತು?

Police Wife
Published on

ಚಾಮರಾಜನಗರ: ಗಂಡ-ಹೆಂಡತಿಯ ನಡುವಿನ ಮನಸ್ತಾಪದಿಂದ ಬೇಸರಗೊಂಡು ಪೊಲೀಸ್​ ಪೇದೆಯ ಪತ್ನಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ಕೊಳ್ಳೇಗಾಲದ ಪೊಲೀಸರ ವಸತಿ ಗೃಹದಲ್ಲಿ ನಡೆದಿದೆ.

ನಾಗರತ್ನ ನೇಣಿಗೆ ಶರಣಾದ ಗೃಹಿಣಿ. ಕೊಳ್ಳೇಗಾಲ ಠಾಣಾ ಪೊಲೀಸ್ ಪೇದೆ ಪರಶುರಾಮ್ ಎಂಬುವರ ಪತ್ನಿ. ಶನಿವಾರ ರಾತ್ರಿ ಪೊಲೀಸ್​ ವಸತಿ ಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಳೆದ ವರ್ಷವಷ್ಟೆ ಮದುವೆಯಾಗಿದ್ದ ನಾಗರತ್ನ‌ ಹಾಗೂ ಪರುಶುರಾಮ್​ ನಡುವೆ ಕೆಲ ಭಿನ್ನಾಭಿಪ್ರಾಯಗಳು ಇದ್ದವು ಎನ್ನಲಾಗಿದೆ. ಇದೇ ಕಾರಣಕ್ಕೆ ಆಗಾಗ ಇಬ್ಬರ ನಡುವೆ ಜಗಳು ನಡೆದಿದೆ ಎಂದು ತಿಳಿದುಬಂದಿದ್ದು, ಇದರಿಂದ ಬೇಸರಗೊಂಡು ನಾಗರತ್ನ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಕೊಳ್ಳೇಗಾಲ ಪಟ್ಟಣ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಾಗರತ್ನರ ಮೃತದೇಹವನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ಶವಪರೀಕ್ಷೆಗಾಗಿ ರವಾನಿಸಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net