

ಕೊಪ್ಪಳ: ಪಾಪಿ ಪತಿಯೊಬ್ಬ ಕುಡಿದ ಅಮಲಿನಲ್ಲಿ ಪೆಟ್ರೋಲ್ ಸುರಿದು ತನ್ನ ಪತ್ನಿಗೆ ಬೆಂಕಿ ಹಚ್ಚಿರುವ ಅಮಾನವೀಯ ಘಟನೆ ಕೊಪ್ಪಳದ ದೇವರಾಜು ಅರಸು ಬಡಾವಣೆಯಲ್ಲಿ ನಡೆದಿದೆ.
ಶನಿವಾರ ತಡರಾತ್ರಿ ಮಕ್ಕಳ ಮುಂದೆಯೇ ಆರೋಪಿ ಬುಡ್ಡಪ್ಪ ತನ್ನ ಪತ್ನಿ ಚೆನ್ನಮ್ಮಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ದೃಶ್ಯವನ್ನು ಸ್ವತಃ ಮಗಳೇ ವಿಡಿಯೋ ಮಾಡಿದ್ದಾಳೆ.
ಚೆನ್ನಮ್ಮಳಿಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಗಂಡು ಮಗನಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಚೆನ್ನಮ್ಮಳನ್ನು ನಿನ್ನೆ ರಾತ್ರಿಯೇ ಮಗಳು ದೀಪ ತನ್ನ ಅಜ್ಜಿಯ ಸಹಾಯದಿಂದ ತಾಯಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾಳೆ.
ಸದ್ಯ ಚೆನ್ನಮ್ಮ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಡ್ಡಪ್ಪ ನಿತ್ಯ ಕುಡಿದು ಬಂದು ಜಗಳವಾಡುತ್ತಾನೆಂದು ಹಿರಿಯ ಮಗಳು ದೀಪಾ ಹೇಳಿಕೆ ನೀಡಿದ್ದು, ಈ ಸಂಬಂಧ ಕೊಪ್ಪಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)