ಬಿಜೆಪಿಯವ್ರು ದುಡ್ಡು ಕೊಟ್ರೂ ತಗೊಳಿ, ಮಹಿಳೆಯರೇ ಕೈಒಡ್ಡಿ... ಆದ್ರೆ ವೋಟ್​ ಮಾತ್ರ ನಮ್ಗೆ ಹಾಕಿ... ಎಂದ ಅಧ್ಯಕ್ಷೆ!

pushpa
Published on

ರಾಯಚೂರು: ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯ ಕಾವು ಜೋರಾಗಿದೆ. ಇದಾಗಲೇ ಎಲ್ಲಾ ಪಕ್ಷಗಳವರು ಮತಯಾಚನೆಯಲ್ಲಿ ತೊಡಗಿದ್ದು, ಬೇರೆ ಪಕ್ಷಗಳ ವಿರುದ್ಧ ಸಮರ ಸಾರಿದ್ದಾರೆ.

ಇವೆಲ್ಲವೂ ರಾಜಕೀಯದಲ್ಲಿ ಹೊಸತೇನಲ್ಲ. ಆದರೆ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ರಾಯಚೂರು ಜಿಲ್ಲೆ ಮಸ್ಕಿಯಲ್ಲಿ ಕೆಪಿಸಿಸಿ ಮಹಿಳಾ ಘಟಕದ‌ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ ಅವರು ನೀಡಿರುವ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ. ಅವರ ಹೇಳಿಕೆ ಚುನಾವಣಾ ನೀತಿ ಸಂಹಿತೆಯ ವಿರುದ್ಧವಾಗಿರುವುದಾಗಿ ಇದೀಗ ಆರೋಪ- ಪ್ರತ್ಯಾರೋಪಗಳು ಶುರುವಾಗಿದೆ.

ಅಷ್ಟಕ್ಕೂ ಪುಷ್ಪಾ ಅವರು ಹೇಳಿರುವುದು ಏನೆಂದರೆ, ಬಿಜೆಪಿಯವರು ಹಣ ಕೊಟ್ಟರೂ ಮಹಿಳೆಯರು ಅದನ್ನು ತೆಗೆದುಕೊಳ್ಳಲು ಮುಂದಾಗಿ. ಯಾವುದೇ ಕಾರಣಕ್ಕೂ ಬೇಡ ಎನ್ನಬೇಡಿ. ಅದು ಅವರಪ್ಪನ ಮನೆಯಿಂದ ತಂದಿರೋದಲ್ಲ. ನಿಮ್ಮ ಹಣ ಲೂಟಿ ಹೊಡೆದು ನಿಮಗೆ ಕೊಡ್ತಿದ್ದಾರೆ. ಬಿಜೆಪಿ ಹಣ ತಗೊಂಡು ಕಾಂಗ್ರೆಸ್​ಗೆ ವೊಟ್ ಹಾಕಿ ಎಂದಿದ್ದಾರೆ!

ಮಹಿಳೆಯರಿಗೆ ಹೆಚ್ಚು ಅವಕಾಶ ಸಿಕ್ಕಿದ್ದು ಕಾಂಗ್ರೆಸ್​ನಲ್ಲಿ ಮಾತ್ರ. ಕಾಂಗ್ರೆಸ್ ಅಭ್ಯರ್ಥಿ ಸರಳ- ಸಜ್ಜನ ವ್ಯಕ್ತಿ, ಬಿಜೆಪಿ ಅಭ್ಯರ್ಥಿ ಕಮೀಷನ್ ಏಜೆಂಟ್ ಎಂದು ಇದೇ ಸಂದರ್ಭದಲ್ಲಿ ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net