ಕೊಡ್ಲಮೊಗರು ಶಾಲೆಯಲ್ಲಿ ಕಲಿಕೋತ್ಸವ

1 (1)
Published on

ಮಂಜೇಶ್ವರ: ಕೊಡ್ಲಮೊಗರು ಶ್ರೀ ವಾಣೀ ವಿಜಯ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಲಿಕೋತ್ಸವ ನಡೆಯಿತು. ಶಾಲಾ ಪಿಟಿಎ ಕಾರ್ಯಕಾರಿ ಸಮಿತಿ ಸದಸ್ಯ ಅಬ್ದುಲ್ ಅಜೀಜ್ ಅಧ್ಯಕ್ಷತೆ ವಹಿಸಿದ್ದರು. ಎಂಪಿಟಿಎ ಅಧ್ಯಕ್ಷೆ ರೆಹನಾ ಉದ್ಘಾಟಿಸಿದರು. ಮುಖ್ಯಶಿಕ್ಷಕಿ ಕೃಷವೇಣಿ ಬಿ.ಟೀಚರ್ ಕಲಿಕೋತ್ಸವದ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಿರಿಯ ಅಧ್ಯಾಪಕರಾದ ಶ್ಯಾಮ್ ಭಟ್ ಮತ್ತು ಆರತಿ, ಪಿಟಿಎ ಕಾರ್ಯಕಾರಿ ಸಮಿತಿ ಸದಸ್ಯ ಉಸ್ಮಾನ್ ಶುಭಹಾರೈಸಿದರು.

ಮಕ್ಕಳ ಕಲಿಕಾ ಚಟುವಟಿಕೆಗಳ ಪ್ರದರ್ಶನ ನಡೆಯಿತು. ಮಕ್ಕಳು ತಯಾರಿಸಿದ ಚಿಗುರು ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ವಿದ್ಯಾರ್ಥಿನಿ ಡೀವಿತಾ ಕೆ.ಸ್ವಾಗತಿಸಿ, ಫಾತಿಮತ್ ಶೈಮಾ ವಂದಿಸಿದರು. ಡೀವಿತಾ ಮತ್ತು ಆದಿರಾ ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕ ವೃಂದ, ಅಧ್ಯಾಪಕೇತರ ಸಿಬ್ಬಂದಿ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net